ಮುಹಿಯದ್ದಿನ್ ಜುಮ್ಮಾ ಮಸೀದಿ, ಹಯಾತುಲ್ ಇಸ್ಲಾಂ ಕಮಿಟಿ ಕಲ್ಲುಗುಂಡಿ ಇದರ ವತಿಯಿಂದ ಮೀಲಾದ್ ಸಮಿತಿ ಸಭೆಯು ಆಗಸ್ಟ್ 8 ರಂದು ಎಚ್ ಐ ಎಂ ಮದರಸ ಹಾಲ್ ನಲ್ಲಿ ನಡೆಯಿತು.















ಸಭೆಯ ಅಧ್ಯಕ್ಷತೆಯನ್ನು ಎಂ ಜೆ ಎಂ ಕಲ್ಲುಗುಂಡಿ ಮಸೀದಿ ಅಧ್ಯಕ್ಷರಾದ ಎಸ್ ಆಲಿ ಹಾಜಿ ವಹಿಸಿದರು
ಸಭೆಯಲ್ಲಿ ಸಿರಾಜುಲ್ ಇಸ್ಲಾಂ ಅಸೋಸಿಯೆಷನ್, ಫಾತಿಮಾ ಮಹಿಳಾ ಶರೀಯತ್ ಕಾಲೇಜು ಆಡಳಿತ ಸಮಿತಿ, ಎಚ್ ಐ ಎಂ ಹಳೆ ವಿದ್ಯಾರ್ಥಿ ಸಂಘ, ಸಿ ಎಫ್ ಸಿ, ಸಿ ಡಬ್ಲ್ಯೂ ಎಫ್ ನ ಸದಸ್ಯರು ಭಾಗವಹಿಸದರು.
ಮೀಲಾದ್ ಸಮಿತಿ ರಚನೆ :
ಅಧ್ಯಕ್ಷರಾಗಿ ರಫೀಕ್ ಕರಾವಳಿ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಹನೀಫ ಎಸ್ ಎ ಚಟ್ಟೆಕಲ್ಲು, ಕೋಶಾಧಿಕಾರಿಯಾಗಿ ರಫೀಕ್ ಪ್ರಗತಿ ಯನ್ನು, ಕಾರ್ಯದರ್ಶಿಯಾಗಿ ರುಶೈದ್ ಕೆಆರ್ ಹಾಗೂ ಉಪಸಮಿತಿಗಳಿಗೆ ಸುಮಾರು 25 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.










