















ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಬೆಳ್ಳಾರೆಯ ಸ್ನೇಹ ಸದನ ಸಭಾಂಗಣದಲ್ಲಿ ಆ. 9ರಂದು ಸ್ನೇಹಿತರ ಕಲಾ ಸಂಘದ ಅಧ್ಯಕ್ಷರಾದ ಪದ್ಮನಾಭ ಬೀಡುರವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘದ ನಿಕಟಪೂರ್ವಾಧ್ಯಕ್ಷ ವಸಂತ ಉಲ್ಲಾಸ್, ಕಾರ್ಯದರ್ಶಿ ಗಣೇಶ್ ಪಾಟಾಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ವಸಂತ ಗೌಡ ಪಡ್ಪು ಸ್ವಾಗತಿಸಿ, ಜತೆ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ತಡಗಜೆ ವಂದಿಸಿದರು. ಕೋಶಾಧಿಕಾರಿ ಶ್ರೀನಿವಾಸ ನಾಯ್ಕ ಕುರುoಬುಡೇಲು ಕಾರ್ಯಕ್ರಮ ನಿರೂಪಿಸಿದರು.










