ಚೆಂಬು ವ್ಯಾಪ್ತಿಯಲ್ಲಿ ಚುರುಕು ಗೊಂಡ ಪುಂಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ

0

ಕೇಂದ್ರ ಪರಿಸರ ಇಲಾಖೆಯ ಅನುಮತಿಗಾಗಿ ಕಾಯುತ್ತಿರುವ ಅದ್ಇಕಾರಿಗಳು

ಸಂಪಾಜೆ ರೇಂಜರ್ ದೇಚಮ್ಮ ಮಾಹಿತಿ

ಚೆಂಬು ಗ್ರಾಮದ ದಬ್ಬಡ್ಕ ಭಾಗದಲ್ಲಿ ಆನೆ ತುಳಿತದಿಂದ ರೈತ ಮೃತಪಟ್ಟ ಬಳಿಕ, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣರವರ ಸೂಚನೆ ಹಿನ್ನಲೆಯಲ್ಲಿ ಆನೆ ಪತ್ತೆ ಮಾಡುವ ಮತ್ತು ಸೆರೆ ಹಿಡಿಯುವ ಕಾರ್ಯಾಚರಣೆ ಚುರುಕುಗೊಂಡಿರುವುದಾಗಿ ಸಂಪಾಜೆ ರೇಂಜರ್ ದೇಚಮ್ಮ ಮಾಹಿತಿ ನೀಡಿದ್ದಾರೆ.

ಸುಮಾರು 35 ಅರಣ್ಯ ಸಿಬ್ಬಂದಿಗಳು ಇ ಟಿ ಎಫ್ ಹಾಗೂ ಆರ್ ಆರ್ ಎಫ್ ತಂಡಗಳು ಕಾರ್ಯಾಚರಣೆಯಲ್ಲಿದ್ದು, ಆನೆ ಚಲನವಲನದ ಜಾಡನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.

ಎಂ. ಚೆಂಬು, ದಬ್ಬಡ್ಕ , ಊರುಬೈಲು ಚೆಂಬು ಹಾಗೂ ಕಟ್ಟಪಳ್ಳಿ ಭಾಗದಲ್ಲಿ 2-3 ಆನೆಗಳು ಓಡಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಧಿಕಾರಿಗಳು, ದಾಳಿ ಮಾಡಿದ ಆನೆಯ ಗುರುತು ಪತ್ತೆಗೆ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ಈಗಾಗಲೇ ಆನೆಯ ಜಾಡು ಪತ್ತೆಯಾಗಿದ್ದು ರಕ್ಷಿತಾರಣ್ಯದ ಒಳಗಡೆ ಇದೆ ಎಂಬ ಮಾಹಿತಿ ತಿಳಿದುಬಂದಿದೆ.

ನಾಳೆ ದಿನ ಪತ್ತೆ ಕಾರ್ಯ ಮತ್ತಷ್ಟು ಚುರುಕುಗೊಳಿಸುವುದಾಗಿಯೂ, ರಾತ್ರಿ ಪಾಳಿಯಲ್ಲಿಯೂ ಕೆಲಸ ಮಾಡುತ್ತಿರುವುದಾಗಿಯೂ ರೇಂಜರ್ ತಿಳಿಸಿದ್ದಾರೆ‌

ಅನುಮತಿಗಾಗಿ ಕಾಯುತ್ತಿರುವ ಅಧಿಕಾರಿಗಳು
ಪುಂಡಾನೆಯನ್ನು ಸೆರೆ ಹಿಡಿಯಲು ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿದ್ದು, ಕೇಂದ್ರ ಪರಿಸರ ಇಲಾಖೆ ಅನುಮತಿಗಾಗಿ ಅಧಿಕಾರಿಗಳು ಕಾಯುತ್ತಿರುವುದಾಗಿಯೂ ದೇಚಮ್ಮ ಮಾಹಿತಿ ನೀಡಿದ್ದಾರೆ.

ಸಂಪಾಜೆ ಆರ್. ಎಫ್. ಓ. ದೇಚಮ್ಮ ಟಿ. ವಿ ಒನ್ ಗೆ ಮಾಹಿತಿ.