ಸುಬ್ಬಪ್ಪ ಗೌಡ ಗುಂಡ್ಲ ತೋಟಕ್ಕೆ ನುಗ್ಗಿದ ಕಾಡಾನೆ ಹಿಂಡು, 2 ಎಕ್ರೆ ಕೃಷಿ ನಾಶ

0

ಅರಂತೋಡು ಗ್ರಾಮದ ಗುಂಡ್ಲ ಸುಬ್ಬಪ್ಪ ಗೌಡರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆ ಹಿಂಡು ನೂರಾರು ಬಾಳೆ ಸೇರಿದಂತೆ ಕೃಷಿ ತೋಟಕ್ಕೆ ಹಾನಿ ಮಾಡಿದ ಘಟನೆ ಆ. 9ರಂದು ನಡೆದಿದೆ.


ಸುಮಾರು 2 ಎಕ್ರೆ ಕೃಷಿಭೂಮಿಯನ್ನು ನಾಶ ಮಾಡಿರುವುದಾಗಿ ಸುದ್ದಿಗೆ ತಿಳಿಸಿರುವ ತೋಟದ ಮಾಲಕರು ಅಡಿಕೆ ಹಳದಿ ರೋಗದಿಂದ ಕಂಗೆಟ್ಟಿದ ಇವರು ಬಾಳೆಯನ್ನು‌ ನಂಬಿದ್ದರೆನ್ನಲಾಗಿದೆ. ಆದರೆ ಆನೆಗಳ ಹಿಂಡು ಪದೇ ಪದೇ ದಾಳಿ ನಡೆಸಿ ಬಾಳೆ ತೋಟಕ್ಕೆ ಸಂಪೂರ್ಣ ಹಾನಿ ಮಾಡಿರುವುದಾಗಿ ತಿಳಿಸಿದ್ದಾರೆ.