ಗುತ್ತಿಗಾರಿನಲ್ಲಿ ಆಟಿ ಉತ್ಸವ, ಪೋಷನ್ ಮಾಸಾಚರಣೆ, ಸ್ತನ್ಯಪಾನ ಸಪ್ತಾಹ ಮತ್ತು ಸನ್ಮಾನ

0

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಮಂಗಳೂರು, ಶಿಶು ಅಭಿವೃದ್ಧಿ ಇಲಾಖೆ,ಸುಳ್ಯ,
ಶಂಖಶ್ರೀ ಸ್ತ್ರೀ ಶಕ್ತಿಗೊಂಚಲು ಗುತ್ತಿಗಾರು,ಆಟಿ ಉತ್ಸವ , ಪೋಷಣೆ ಮಾಸಚರಣೆ,ಸ್ತನ್ಯಪಾನ ಸಪ್ತಾಹ,ಹಾಗೂ ಸನ್ಮಾನ ಕಾರ್ಯಕ್ರಮ ಆ.11ರಂದು ಗುತ್ತಿಗಾರಿನ ಪ.ಪಂಗಡದ ಸಭಾಭವನ ದಲ್ಲಿ ಶಂಖಶ್ರಿ ಸ್ತ್ರೀ ಶಕ್ತಿ ಗೊಂಚಲಿನ ಅಧ್ಯಕ್ಷ ರಾದ ಶ್ರೀಮತಿ ಯಮಿತಾ ಪೂರ್ಣಚಂದ್ರ ಪೈಕ ಇವರ ಅಧ್ಯಕ್ಷ ತೆಯಲ್ಲಿ ನಡೆಯಿತು. ಕಾರ್ಯಕ್ರಮ ದ ಉದ್ಘಾಟನೆ ಯನ್ನು ಶ್ರೀಮತಿ ಸಾವಿತ್ರಿ ಚಿಲ್ತಡ್ಕ ನೆರವೇರಿಸಿದರು.ಚೆನ್ನೆಮಣ್ಣೆ ಆಟ ಆಡುವುದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆಯನ್ನು ನೀಡಲಾಯಿತು.


ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯ ಜಿಲ್ಲಾ ಉಪನಿರ್ದೇಶಕ ರಾದ ಉಸ್ಮಾನ್ ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಮೂಕಮಲೆ ,ಪ್ರಭಾರ ಸಿ.ಡಿ.ಪಿ.ಒ ರಾದ ಶ್ರೀಮತಿ ಶೈಲಜಾ ಬಿ., ಗುತ್ತಿಗಾರು ವಲಯ ಮೇಲ್ವಿಚಾರಕರಾದ ಶ್ರೀಮತಿ ದೀಪಿಕಾ ಪಿ.,ಸಖಿ ಸೆಂಟರ್ ನ ಆಡಳಿತಾಧಿಕಾರಿ ಗಳಾದ ಶ್ರೀಮತಿ ಪ್ರಿಯಾ ರಾಜ್ ಮೋಹನ್ ,ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಳಾದ ಶ್ರೀಮತಿ ಪ್ರಮೀಳಾ ನಾರಾಯಣ್ ಉಪಸ್ಥಿತರಿದ್ದರು.

ಅತಿಥಿ ಗಳೆಲ್ಲರೂ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.
ಸಮಾರಂಭದಲ್ಲಿ ಶ್ರೀಮತಿ ಡಾ. ವಿಜಯಲಕ್ಷ್ಮಿ ಕರುವಜೆ , ಹಿರಿಯ ನಾಟಿ ವೈದ್ಯರಾದ ಶ್ರೀಮತಿ ಅನಿತಾ ಮಹೇಶ್ ಗುತ್ತಿಗಾರು ,ನಿವೃತ್ತ ಸಿ.ಆರ್.ಪಿ.ಎಫ್. ಯೋಧರನ್ನು ಸನ್ಮಾನಿಸಲಾಯಿತು.
ಗುಂಪಿನ ಸದಸ್ಯರು ಮಾಡಿ ತಂದಿರುವ ಆಟಿ ಖಾದ್ಯಗಳ ನ್ನು ಸವಿಯಲಾಯಿತು.
ಪ್ರಾರ್ಥನೆ ಯನ್ನು ಶ್ರೀಮತಿ ನಿರ್ಮಲ ದೇವ ನೆರವೇರಿಸಿದರು,ಶ್ರೀಮತಿ ರಮ್ಯಾ ಸ್ವಾಗತಿಸಿದರು ,ಶ್ರೀಮತಿ ತೀರ್ಥಕುಮಾರಿ ವರದಿ ವಾಚಿಸಿದರು. ಶ್ರೀಮತಿ ಅಭಿಲಾಶ ರವರು ಕಾರ್ಯಕ್ರಮ ನಿರೂಪಿಸಿ,ಅಂಗವಾಡಿ ಕಾರ್ಯಕರ್ತೆ ಲತಾ ಅಂಬೆಕಲ್ಲು ವಂದಿಸಿದರು.