ಜಾಲ್ಸೂರಿನ ಸುಬ್ರಹ್ಮಣ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವತಿಯಿಂದ ಆಟಿಡ್ ಒಂಜಿ ದಿನ ಕಾರ್ಯಕ್ರಮವು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವೇದಾ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಆ.12 ರಂದು ಅಡ್ಕಾರಿನಲ್ಲಿರುವ ಸಂಜೀವಿನಿ ಒಕ್ಕೂಟದ ಸಭಾಭವನದಲ್ಲಿ ಜರುಗಿತು.

ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಅಡ್ಕಾರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆಟಿ ತಿಂಗಳ ಮಹತ್ವದ ಬಗ್ಗೆ ಶ್ರೀಮತಿ ಸಾವಿತ್ರಿ ಕಣೆಮರಡ್ಕ ಮಾತನಾಡಿದರು.








ಗ್ರಾಮ ಪಂಚಾಯತ್ ಕಾರ್ಯದರ್ಶಿ ಚಿದಾನಂದ, ಕ್ಲಸ್ಟರ್ ಸೂಪರ್ವೈಸರ್ ಮಹೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳೆಯರಿಗೆ ಕ್ರೀಡಾ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಆಟಿ ಕೂಟದ ಪ್ರಯುಕ್ತ ಎಲ್ಲಾ ಸಂಘದ ಸದಸ್ಯರು ವಿವಿಧ ಬಗೆಯ ಆಟಿ ಖಾದ್ಯಗಳನ್ನು ತಯಾರಿಸಿ ತಂದು ಉಣಬಡಿಸಿದರು.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿವಿಧ ಬಗೆಯ ಆಟಿ ಖಾಧ್ಯ ಗಳನ್ನು ಸವಿದು ಸಂಭ್ರಮಿಸಿದರು. ಸಮಾರಂಭಕ್ಕೆ ಆಟಿ ಕಳೆಂಜ ಬಂದಾಗ ದಾನ ನೀಡಲಾಯಿತು.

ಸೌಮ್ಯ ಕದಿಕಡ್ಕ ಪ್ರಾರ್ಥಿಸಿದರು. ರಶ್ಮಿ ಕಾಳಮ್ಮನೆ ಸ್ವಾಗತಿಸಿ,
ಲೋಕೇಶ್ವರಿ ವಂದಿಸಿದರು. ವಿಜಯ ಕಾಳಮ್ಮನೆ ಕಾರ್ಯಕ್ರಮ ನಿರೂಪಿಸಿದರು.










