







ಚೆಂಬು ಗ್ರಾಮದ ದಬ್ಬಡ್ಕ ಭಾಗದಲ್ಲಿ ಆನೆ ತುಳಿತದಿಂದ ರೈತ ಮೃತಪಟ್ಟ ಬಳಿಕ, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣರವರ ಸೂಚನೆ ಹಿನ್ನಲೆಯಲ್ಲಿ ಹಾಗೂ ಕೆ. ಜಿ ಬೋಪಯ್ಯ ನೇತೃತ್ವದಲ್ಲಿ ಆಗಸ್ಟ್ 11 ರಂದು ಚೆಂಬು ಸಾರ್ವಜನಿಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಿನ್ನಲೆಯಲ್ಲಿ ಆನೆ ಪತ್ತೆ ಮಾಡುವ ಮತ್ತು ಸೆರೆ ಹಿಡಿಯುವ ಕಾರ್ಯಾಚರಣೆ ಆ .12 ರಂದು ಚುರುಕುಗೊಂಡಿದೆ.
ಮೂರು ವಿಭಾಗದ ತಂಡಗಳಾಗಿ ಒಟ್ಟು 35 ಅರಣ್ಯ ಸಿಬ್ಬಂದಿಗಳು ಇ ಟಿ ಎಫ್ ಹಾಗೂ ಆರ್ ಆರ್ ಎಫ್ ತಂಡಗಳು ಕಾರ್ಯಾಚರಣೆಯಲ್ಲಿದ್ದು, ಆನೆ ಚಲನವಲನದ ಜಾಡನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ. ಎಂ. ಚೆಂಬು, ದಬ್ಬಡ್ಕ, ಊರುಬೈಲು ಚೆಂಬು ಹಾಗೂ ಕಟ್ಟಪಳ್ಳಿ ಭಾಗದಲ್ಲಿ 2-3 ಆನೆಗಳು ಓಡಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಧಿಕಾರಿಗಳು, ದಾಳಿ ಮಾಡಿದ ಆನೆಯ ಗುರುತು ಪತ್ತೆಗೆ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.










