ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಸ್ಕೃತ ಸಪ್ತಾಹ

0

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ
ಸಂಸ್ಕೃತ ಸಂಘದ ವತಿಯಿಂದ ಸಂಸ್ಕೃತ ಸಪ್ತಾಹವು ದಿನಾಂಕ ಆ. 5 ರಿಂದ ಆ. 11 ವರೆಗೆ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಆ. 5 ರಂದು ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ ವಿ ಯವರು ಸಂಸ್ಕೃತ ಪತ್ರದ ಅಂಚೆಪೆಟ್ಟಿಗೆ ಅನಾವರಣ ಗೊಳಿಸುವ ಮೂಲಕ ನೆರವೇರಿಸಿದರು.
ಒಂದು ವಾರಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿಗಳಿಗೆ ಸಂಸ್ಕೃತ ಸಮೂಹ ಗಾಯನ, ಸಂಸ್ಕೃತ ಲೇಖನ ಪತ್ರ, ಸಂಸ್ಕೃತ ಪ್ರಬಂಧ ಹಾಗೂ ಸಂಸ್ಕೃತ ವೀಡಿಯೊ ಬ್ಲಾಗಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಅಂಗವಾಗಿ ವಿಧ್ಯಾರ್ಥಿಗಳು ಸಾರ್ವಜನಿಕರಲ್ಲಿ ಸಂಸ್ಕೃತ ಭಾಷೆಯ ಜಾಗೃತಿ ಮೂಡಿಸುವ ಸಲುವಾಗಿ ಕಾಲೇಜಿನ ವಠಾರದಲ್ಲಿ ಬೀದಿ ನಾಟಕವನ್ನು ನಡೆಸಿದರು.

ಆ. 8 ರಂದು ಸಂಸ್ಕೃತ ಸಪ್ತಾಹದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಂಸ್ಕೃತ ಜಾಗರಣಾ ಕಾರ್ಯಕ್ರಮವು ಪಯಸ್ವಿನಿ ಪ್ರೌಡ ಶಾಲೆ ಜಾಲ್ಸೂರು ಹಾಗೂ ರೋಟರಿ ಪ್ರೌಢಶಾಲೆ ಮಿತ್ತಡ್ಕ, ಸುಳ್ಯ ದಲ್ಲಿ ಬೀದಿ ನಾಟಕದ ಮೂಲಕ ನೆರವೇರಿಸಿದರು.

ಸಮಾರೋಪ ಸಮಾರಂಭವು ದಿನಾಂಕ ಆ.11 ರಂದು ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ನೆರವೇರಿತು. ಕಾಲೇಜಿನ ಮೆಡಿಕಲ್ ಆಫೀಸರ್ ಡಾ. ಸನತ್ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿವೇಕಾನಂದ ವಿದ್ಯಾಸಂಸ್ಥೆಯ ಶಿಕ್ಷಕ ಶ್ರೀವರ ಕೆ ವಿ ಅವರು ಮಾತನಾಡುತ್ತಾ ಆಯುರ್ವೇದದಲ್ಲಿ ಸಂಸ್ಕೃತದ ಪಾತ್ರ ಹಾಗೂ ಅದರ ಮಹತ್ವವನ್ನು ವಿಧ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ವಿನಯ್ ಶಂಕರ್ ಭಾರದ್ವಾಜ್, ಸಂಹಿತಾ ಸಿದ್ಧಾಂತ ವಿಭಾಗದ ಮುಖ್ಯಸ್ಥೆ ಡಾ. ಶ್ರೀಜ ಎಸ್., ಹಾಗೂ ಸಂಸ್ಕೃತ ಸಂಘದ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ದೇರ್ಲಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕುಮಾರಿ ನೀಲಿಮಾ ಮತ್ತು ಬಳಗ ಪ್ರಾರ್ಥಿಸಿ, ಸಂಹಿತಾ ಸಿದ್ಧಾಂತ ವಿಭಾಗದ ಮುಖ್ಯಸ್ಥೆ ಡಾ. ಶ್ರೀಜ ಸ್ವಾಗತಿಸಿ, ಸಂಹಿತ ಸಿದ್ಧಾಂತ ವಿಭಾಗ ಪ್ರಾದ್ಯಾಪಕರಾದ ಡಾ. ವಿಷ್ಣು ಕೃಷ್ಣನ್ ಅವರು ವಂದಿಸಿ, ವಿದ್ಯಾರ್ಥಿಗಳಾದ ಧ್ಯಾನ ವಿಜಯ್ ಹಾಗೂ ಮಾನ್ಯ ಅಂಬೆಕಲ್ಲು ನಿರೂಪಿಸಿದರು.