ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂದ್ರಪ್ಪಾಡಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ನಮ್ಮ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ವೀಣಾ ಕುಮಾರಿ ಎಂ ವಿ ರವರು ವಹಿಸಿಕೊಂಡಿದ್ದರು.








ಶಾಲೆಯ ಮುಖ್ಯ ಗುರುಗಳಾದ ವಾಣಿ.ಕೆ.ಎಸ್.ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಬಳಿಕ ಶಾಲೆಯ ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಂದ ತರಗತಿವಾರು ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಒಂದನೇ ತರಗತಿಗೆ ದಾಖಲಾದ ಎರಡು ವಿದ್ಯಾರ್ಥಿಗಳಿಗೆ ರೂ. 1000 ದಂತೆ ದತ್ತಿ ನಿಧಿಯನ್ನು ಶ್ರೀಯುತ ಸುಕುಮಾರ ಕಂದ್ರಪ್ಪಾಡಿ ಅಮೇರಿಕಾದ ಪ್ರತಿಷ್ಟಿತ ಪಾಲೋಮಾರ್ ಟೆಕ್ನಾಲಜೀಸ್ ನಲ್ಲಿ ದಕ್ಷಿಣ ಎಷ್ಯಾದ ಸರ್ವಿಸ್ ಇಂಜಿನಿಯರ್ ಮತ್ತು ಶಾಲೆಯ ಹಿರಿಯ ವಿದ್ಯಾರ್ಥಿ ಇವರು ನೀಡಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ರವರು, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕುಶಾಲಪ್ಪ ಮಾಸ್ತರ್ ರುದ್ರಚಾಮುಂಡಿ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರಾದ ದಿವಾಕರ ಮುಂಡೋಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಕೇಶ್ ರಾಜ್ ಹಿರಿಯಡ್ಕ ಕಾರ್ಯದರ್ಶಿಯಾದ ಪ್ರೀತಂ ಮುಂಡೋಡಿ ಶತಮಾನೋತ್ಸವ ಸಮಿತಿಯ ಸದಸ್ಯರಾದ ವಿಜೇಶ್ ಹಿರಿಯಡ್ಕ , ಎಂ ಅರ್ ಪುರುಷೋತ್ತಮ ಮುಂಡೋಡಿ , ಹಿರಿಯ ವಿದ್ಯಾರ್ಥಿಯಾದಂತಹ ಓಂ ಪ್ರಕಾಶ್ ಮುಂಡೋಡಿ ,ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಹರಿಪ್ರಸಾದ್, ಎಸ್.ಡಿ.ಎಂ.ಸಿಯ ಎಲ್ಲಾ ಸದಸ್ಯರು ಮತ್ತು ಪೋಷಕರು ಹಿರಿಯ ನಾಗರಿಕರು, ಹಿರಿಯ ವಿದ್ಯಾರ್ಥಿಗಳು, ಅಂಗನವಾಡಿ ಸಹಾಯಕರು ಅಂಗನವಾಡಿಯ ಪುಟಾಣಿ ಮಕ್ಕಳು ಮತ್ತು ನಮ್ಮ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.
ವಿವಿಧ ಘೋಷಣೆಗಳೊಂದಿಗೆ ಮಕ್ಕಳು ಪೋಷಕರು, ಊರಿನವರೊಂದಿಗೆ ಪ್ರಭಾತ ಬೇರಿಯನ್ನು(ಮೆರವಣಿಗೆ) ಮಾಡಲಾಯಿತು. ಕಾರ್ಯಕ್ರಮವನ್ನು ಸಹ ಶಿಕ್ಷಕಿಯಾದ ಆಶಾರಾಣಿ ಹೆಚ್.ಸಿ ನಿರೂಪಿಸಿ, ಶಿಕ್ಷಕರಾದ ಅಜಯ ಕೆ ಎಂ ರವರು ವಂದಿಸಿದರು.










