ಪಡ್ಪಿನಂಗಡಿ ಸ. ಹಿ ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪಡ್ಪಿನಂಗಡಿ ಸ. ಹಿ ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಎಸ್. ಡಿ. ಎಂ ಸಿ ಅಧ್ಯಕ್ಷ ಮಹಮ್ಮದ್ ರಫೀಕ್. ಟಿ. ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ , ಗ್ರಾಮ ಪಂಚಾಯತ್ ಸದಸ್ಯರಾದ ಹಾಜಿರ , ಲೋಕಯ್ಯ ನಾಯ್ಕ್ , ನಿವೃತ್ತ ಶಿಕ್ಷಕರಾದ ವಾಸುದೇವನಡ್ಕ , ಶ್ರೀಮತಿ ರುಕ್ಮಿಣಿ , ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಂತಿಯಾಸ್ , ಕ್ಲಾಸಿಕಲ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಮಾಲ್, ಇಸ್ಮಾಯಿಲ್ ಪಡ್ಪಿನಂಗಡಿ, ದಾವುದ್ ಮುಚ್ಚಿಲ, ಹಾಗೂ ಹಳೆ ವಿದ್ಯಾರ್ಥಿಗಳು, ಊರಿನ ಗಣ್ಯರು
ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಶ್ರೀಮತಿ ಧರ್ಮಾವತಿ. ಟಿ ಸ್ವಾಗತಿಸಿದರು.ಸಹ ಶಿಕ್ಷಕಿ ಶ್ರೀಮತಿ ಸರೋಜಿನಿ ವಂದಿಸಿದರು. ಸಹಶಿಕ್ಷಕರಾದ ಶ್ರೀಮತಿ ಯೋಗೀಶ್ವರಿ. ಪಿ.ಮತ್ತು ಶ್ರೀಮತಿ ಶಾಕಿರ ಇವರು ದತ್ತಿ ನಿಧಿ ವಿತರಣೆ ಮಾಡಿದರು. ಸಹ‌ ಶಿಕ್ಷಕಿ ಕುಮಾರಿ ಲಾವಣ್ಯ ಸಹ ಶಿಕ್ಷಕಿ ನಿರೂಪಿಸಿದರು.