ಮೆಟ್ಟಿನಡ್ಕ ಶಾಲೆಯಲ್ಲಿ 79 ನೇ ಸ್ವಾತಂತ್ರೋತ್ಸವ

0

ದ. ಕ. ಜಿ.ಪಂ. ಕಿ. ಪ್ರಾ ಶಾಲೆ ಮೆಟ್ಟಿನಡ್ಕದಲ್ಲಿ 79 ನೇ ಸ್ವಾತಂತ್ರೋತ್ಸವ ಆ.15 ರಂದು ಜರುಗಿತು.

ಧ್ವಜಾರೋಹಣವನ್ನು ಗ್ರಾಂ. ಪಂ. ನ ಸದಸ್ಯರಾದ ಶ್ರೀಮತಿ ಅನಿತಾ ರಮಾನಂದರವರು ನೆರವೇರಿಸಿದರು. ನಂತರ ವಿದ್ಯಾರ್ಥಿ ಗಳು ಹಿರಿಯವಿದ್ಯಾರ್ಥಿಗಳು, ಪೋಷಕರು, ಮತ್ತು ಶಿಕ್ಷಕರು ಸೇರಿ ಮುಖ್ಯ ರಸ್ತೆ ಯಲ್ಲಿ ಮೆರವಣಿಗೆ ಯಲ್ಲಿ ಘೋಷಣೆ ಗಳನ್ನು ಕೂಗುತ್ತಾ ಸಾಗಿದರು. ಬಳಿಕ ಸಭಾಕಾರ್ಯಕ್ರಮ ನಡೆಯಿತು, ಸಭೆಯ
ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಮೇಶ್ ಮೆಟ್ಟಿನಡ್ಕ ವಹಿಸಿದ್ದರು.

ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಯ ಉಪಾಧ್ಯಕ್ಷೆ, ಶ್ರಿಮತಿ ಹರೀಣಾಕ್ಷಿ, ಶಾಲಾ ಮುಖ್ಯ ಶಿಕ್ಷಕಿ ಶ್ರಿಮತಿ ಗೀತಾಲಕ್ಷ್ಮಿ,
ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕಮಲ ಉಪಸ್ಥಿತರಿದ್ದರು, ವಿದ್ಯಾರ್ಥಿಗಳು ಮತ್ತು ಪೋಷಕರಿಂದ , ಭಾಷಣ, ಹಾಗೂ ದೇಶಭಕ್ತಿಗೀತೆ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಲಾಯಿತು.
ಶ್ರೀಮತಿ ಹರೀಣಾಕ್ಷಿ ಸ್ವಾಗತಿಸಿ, ಗೌರವ ಶಿಕ್ಷಕಿ ಶ್ರಿಮತಿ ರೇವತಿ, ವಂದಿಸಿದರು, ಮುಖ್ಯಶಿಕ್ಷಕಿ ಶ್ರಿಮತಿ ಗೀತಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.