ಪಿಲಂಕುಜೆ ಮಾಯಿಲಪ್ಪ ಗೌಡ ನಿಧನ

0

ಮುರುಳ್ಯ ಗ್ರಾಮದ ಪಿಲಂಕುಜೆ ನಿವಾಸಿ, ಮುರುಳ್ಯ – ಎಣ್ಮೂರು ಸಹಕಾರಿ ಸಂಘದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಪಿಲಂಕುಜೆ ಮಾಯಿಲಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.16 ರಾತ್ರಿ ನಿಧನರಾದರು.ಅವರಿಗೆ 73 ವರ್ಷ ವಯಸ್ಸಾಗಿತ್ತು.


ಕೊಡುಗೈ ದಾನಿಯಾಗಿದ್ದ ಅವರು ಮುರುಳ್ಯ ಶಾಂತಿನಗರ ಶಾಲೆಗೆ ಕಪಾಟು, ಕಂಪ್ಯೂಟರ್ ಮತ್ತು ಸಮವಸ್ತ್ರ, ಅಲೆಕ್ಕಾಡಿ ಶಾಲೆಗೆ ಕಪಾಟು, ಕೇರ್ಪಡ ಮಹಿಷಮರ್ದಿನಿ ದೇವಸ್ಥಾನಕ್ಕೆ ಕಪಾಟು ನೀಡಿರುತ್ತಾರೆ.ಪ್ರಗತಿಪರ ಕೃಷಿಕರಾಗಿದ್ದ ಅವರು ಹೈನುಗಾರರಾಗಿ, ಜೇನು ಕೃಷಿಕರಾಗಿ, ಕೋಳಿ ಸಾಕಾಣಿಕೆ ನಡೆಸುತ್ತಿದ್ದರು.
ಮೃತರು ಪತ್ನಿ ಮೋಹಿನಿ, ಪುತ್ರ ಬಾಲಚಂದ್ರ ಪಿಲಂಕುಜೆ, ಸೊಸೆ ಕವಿತಾ ಬಾಲಚಂದ್ರ, ಪುತ್ರಿ ಪವಿತ್ರ ಲೋಕೇಶ್ ಉಪ್ಪಿನಂಗಡಿ, ಸಹೋದರರಾದ ದಾಮೋದರ ಗೌಡ ಪಿಲಂಕುಜೆ, ನಿವೃತ್ತ ಯೋಧ ಸುಂದರ ಗೌಡ ಪಿಲಂಕುಜೆ, ಉಮೇಶ್ ಗೌಡ ಐವರ್ನಾಡು, ಮೊಮ್ಮಕ್ಕಳು,ಕುಟುಂಬಸ್ಥರು ,ಬಂಧು ಬಳಗವನ್ನು ಅಗಲಿದ್ದಾರೆ.