ಮೆಸ್ಕಾಂ ನ ಸುಬ್ರಹ್ಮಣ್ಯ ಉಪ ವಿಭಾಗದ ಸುಬ್ರಹ್ಮಣ್ಯ ಶಾಖೆಯ ಪವರ್ ಮ್ಯಾನ್ ಏನೆಕಲ್ಲಿನಲ್ಲಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶ ಲಕ್ಷ್ಮಣ ಹಂಜಗಿ ಮೆಸ್ಕಾಂ ಸೇವಾ ಮಿತ್ರ 2024 – 25 ಪ್ರಶಸ್ತಿಯನ್ನು ಮಂಗಳೂರಿನಲ್ಲಿ ಆ.15 ರಂದು ಕೊಡಮಾಡಲಾಗಿದೆ.















ಮೆಸ್ಕಾಂ ಕಾರ್ಯಕ್ಷೇತ್ರದಲ್ಲಿ ಸಮಗ್ರ ಕಾರ್ಯಚಟುವಟಿಕೆಗಳ ಮೂಲಕ ಕಂಪೆನಿಗೆ ನೀಡಿದ ಕೊಡುಗೆಯನ್ನು ಗುರುತಿಸಿ
ಮಂಗಳೂರು ವಿಭಾಗದಲ ಅತ್ಯುತ್ತಮ ನಿರ್ವಹಣಾ ಸಿಬ್ಬಂದಿ ಎಂದು ಪರಿಗಣಿಸಿ ಪ್ರಶಸ್ತಿ ಕೊಡಲಾಗಿದೆ.
ಇವರು ಮೂಲತಃ ವಿಜಯವಾಡ ಜಿಲ್ಲೆಯ ಹಿಂಡಿ ತಾಲೂಕಿನ ಹಿರೇಮಸಳ್ಳಿ ಗ್ರಾಮದವರು. ಇವರು ಕಳೆದ 10 ವರ್ಷಗಳಿಂದ ಸುಬ್ರಹ್ಮಣ್ಯ ಮೆಸ್ಕಾಂ ನಲ್ಲಿ ಕೆಲಸ ಮಾಡುತಿದ್ದು ಒಂಬತ್ತು ವರ್ಷಗಳಿಂದ ಏನೆಕಲ್ಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.










