ಸುಳ್ಯ:ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ
ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ನೂತನ ಭಜನಾ ಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮ ಆ.15ರಿಂದ ಆರಂಭಗೊಂಡಿದ್ದು ಆ.18ರ ತನಕ ನಡೆಯಲಿದೆ. ಆ.18ರಂದು ಪೂ.10-20ರ ತುಲಾ ಲಗ್ನ ಮುಹೂರ್ತದಲ್ಲಿ
ನೂತನ ಶ್ರೀಕೃಷ್ಣ ಭಜನಾ ಮಂದಿರ ನಿರ್ಮಾಣಕ್ಕೆ
ಶಿಲಾನ್ಯಾಸ ಭೂಮಿ ಪೂಜನ ಕಾರ್ಯಕ್ರಮ ನಡೆಯಲಿದೆ.















ಪೂ.11ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.
ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡ ನಾಯಿರ್‌ಹಿತ್ಲು ಅಧ್ಯಕ್ಷತೆ ವಹಿಸಲಿದ್ದಾರೆ.ಉದ್ಯಮಿ ಹಾಗೂ ಕನಕಮಜಲು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಕಾಮತ್ ವಿನೋಬನಗರ ಶಿಲಾನ್ಯಾಸ ನೆರವೇರಿಸುವರು.ಮುಖ್ಯ ಅತಿಥಿಗಳಾಗಿ ಅಡ್ಕಾರ್ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಅಡ್ಕಾರ್,
ಭಜನಾಮಂದಿರದ ಗೌರವಾಧ್ಯಕ್ಷರಾದ ರುಕ್ಕಯ್ಯಗೌಡ ಎಸ್.ಎನ್. ನಡುಮನೆ,ಕುಕ್ಕನ್ನೂರು ಶ್ರೀ ಕಿನ್ನಿಮಾನಿ ಪೂಮಣಿ ಉಳ್ಳಾಕುಲು ದೇವಸ್ಥಾನದ ಮೊಕ್ತೇಸರರಾದ ಬಾಲಕೃಷ್ಣ ಗೌಡ ಎನ್. ನಡುಬೆಟ್ಟು, ಸೋಣಂಗೇರಿ ಶ್ರೀ ವಿಷ್ಣುಮೂರ್ತಿ ವಯನಾಟ್ ಕುಲವನ್ ದೈವಸ್ಥಾನದ ಗೌರವಾಧ್ಯಕ್ಷ ಮನ್ಮಥ. ಎಸ್.ಎನ್. ನಡುಮನೆ, ಜಾಲ್ಸೂರು ಗ್ರಾ.ಪಂ.ಅಧ್ಯಕ್ಷೆ ಸಾವಿತ್ರಿ ಅಡ್ಕಾರುಬೈಲು, ಗ್ರಾ.ಪಂ.ಸದಸ್ಯರಾದ
ಶಿವಪ್ರಸಾದ್ ನೀರಬಸಿರಿ, ದೀಪ ಅಜಕಲಮೂಲೆ,
ಈಶ್ವರ ನಾಯ್ಕ ಸೋಣಂಗೇರಿ, ಅಂಬಿಕಾ ಕುಕ್ಕನ್ನೂರು,
ಪ್ರಮುಖರಾದ
ನಾಗರಾಜ ಗುರುಸ್ವಾಮಿ ದೇವೇಂದ್ರ ಕುಕ್ಕನೂರು, ಮಹೇಶ್ವರನ್ ಸೋಣಂಗೇರಿ,
ರವೀಂದ್ರನಾಥ್ ಎಸ್.ಎನ್., ದೇವಿಪ್ರಸಾದ್ ಆಳ್ವ ಸೋಣಂಗೇರಿ, ಧನಂಜಯ ಕುಕ್ಕನ್ನೂರು, ಬಾಲಚಂದ್ರ ಎಸ್.ಕೆ. ಕೆಳಮನೆ, ಗಿರೀಶ್ ನಾಯಕ್, ಕುಕ್ಕನ್ನೂರು ಭಾಗವಹಿಸಲಿದ್ದಾರೆ. ಭಜನಾ ಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು.
ಆ.15ರಂದು ಬೆಳಿಗ್ಗೆ ದೀಪ ಪ್ರಜ್ವಲನೆ, ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಬಲಿಕ ಸ್ಥಳೀಯ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಸಂಜೆ ಭಜನಾ ಮಂಗಲಂ, ದೀಪ ವಿಸರ್ಜನೆ ಸ್ವಸ್ತಿ ಪುಣ್ಯಾಹ, ದೀಪಾರಾಧನೆ,
ಸಾಮೂಹಿಕ ಪ್ರಾರ್ಥನೆ, ಶ್ರೀ ಮಹಾಸುದರ್ಶನ ಹವನ, ಬಾಧಾಕರ್ಷಣೆ ಮತ್ತು ಪ್ರೋತೋಚ್ಚಾಟನೆ ನಡೆಯಿತು.
ಆ.16 ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹವನ, ಮೋಕ್ಷನಾರಾಯಣ ಬಲಿ, ತಿಲಶಾಂತಿ, ವೇದಪಾರಾಯಣ, ಭಗವದ್ಗೀತಾ ಪಾರಾಯಣ, ವಿಷ್ಣುಸಹಸ್ರನಾಮ ಪಾರಾಯಣ, ಬ್ರಾಹ್ಮಣರ ಆರಾಧನೆ ನಡೆದು ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಭೋಜನ ಪ್ರಸಾದ ವಿತರಣೆ
ಕಾರ್ಯಕ್ರಮಗಳು ನಡೆಯಿತು.










