ಆ.27 : ಮುಕ್ಕೂರಿನಲ್ಲಿ 16 ನೇ ವರ್ಷದ ಗಣೇಶೋತ್ಸವ ಹಾಗೂ ಚಿತ್ರಕಲಾ ಸ್ಪರ್ಧೆ

0

ಮುಕ್ಕೂರು ‌ : ಕುಂಡಡ್ಕ -ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ16 ನೇ ವರ್ಷದ  ಗಣೇಶೋತ್ಸವ ಆಚರಣೆ, ಕ್ರೀಡಾಕೂಟ, ಸಮ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ‌ಹಾಗೂ ನೇಸರ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಆ.27 ರಂದು ಮುಕ್ಕೂರು ವಠಾರದಲ್ಲಿ ನಡೆಯಲಿದೆ.

ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ
ಬೆಳಗ್ಗೆ 9 ರಿಂದ 11 ಗಂಟೆ ತನಕ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. 1 ನೇ ತರಗತಿಯಿಂದ‌ 3 ನೇ ತರಗತಿ‌ ವಿಭಾಗಕ್ಕೆ ಐಚ್ಛಿಕ, 4 ರಿಂದ 7 ನೇ ತರಗತಿ ವಿಭಾಗಕ್ಕೆ- ಐಚ್ಛಿಕ, 8 ರಿಂದ 10 ನೇ ತರಗತಿ ವಿಭಾಗದವರಿಗೆ ಚಿತ್ರ ಬಿಡಿಸಬೇಕಾದ ವಿಷಯವನ್ನು ಸ್ಥಳದಲ್ಲೇ ತಿಳಿಸಲಾಗುವುದು. ಸ್ಪರ್ಧಿಗೆ ಡ್ರಾಯಿಂಗ್ ಶೀಟ್ ಅನ್ನು ಸ್ಥಳದಲ್ಲಿ ನೀಡಲಾಗುವುದು. ಚಿತ್ರ ಬಿಡಿಸಲು ಬೇಕಾದ ಉಳಿದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಬಹುಮಾನ ನೀಡಲಾಗುತ್ತದೆ. ಯಾವುದೇ ತಾಲೂಕಿನ ವಿದ್ಯಾರ್ಥಿಗಳು ಕೂಡ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ.
ಪ್ರಶಸ್ತಿಗೆ ಆಯ್ಕೆ
ನೇಸರ ವಾರ್ಷಿಕ ಪ್ರಶಸ್ತಿ-2025
ಸಮಾಜ ಸೇವಾ ವಿಭಾಗದಲ್ಲಿ ರಕ್ಷಿತ್ ಕುಮಾರ್ ಪೆರುವಾಜೆ ಆಯ್ಕೆಯಾಗಿದ್ದಾರೆ. ಸಾಧಕರ ಕ್ಷೇತ್ರದಲ್ಲಿ ನಿವೃತ್ತ ಶಿಕ್ಷಕಿ ಲಲಿತಾ ಕುಮಾರಿ ಮನವಳಿಕೆ, ಬೆಳ್ಳಾರೆ ಸಿ.ಎ ಬ್ಯಾಂಕ್ ನಿವೃತ್ತ ಸಿಇಓ ವಿಜಯ ರೈ ನೆಲ್ಯಾಜೆ ಅವರಿಗೆ ಸಮ್ಮಾನ ಹಾಗೂ ಎಸೆಸೆಲ್ಸಿ, ಪಿಯುಸಿ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ.

ಕ್ರೀಡಾಕೂಟ
ಕ್ರೀಡಾಕೂಟದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ಪುರುಷರ ವಿಭಾಗದಲ್ಲಿ ವಾಲಿಬಾಲ್, ಹಗ್ಗಜಗ್ಗಾಟ, ಮಹಿಳಾ ವಿಭಾಗದಲ್ಲಿ ತ್ರೋಬಾಲ್, ಹಗ್ಗಜಗ್ಗಾಟ ಮೊದಲಾದ ಸ್ಪರ್ಧೆ ಗಳು ನಡೆಯಲಿದ್ದು‌ ಸಾರ್ವಜನಿಕರಿಗೆ ಮುಕ್ತ‌ ಪ್ರವೇಶ ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.