ತಹಶೀಲ್ದಾರ್ ಸ್ಥಳಕ್ಕೆ ಭೇಟಿ
ಜಾಗದ ಬಗ್ಗೆ ಇರುವ ದಾಖಲೆ ಪತ್ರ ಕಚೇರಿಗೆ ತರುವಂತೆ ಇತ್ತಂಡದವರಿಗೆ ಸೂಚನೆ
ಗಾಂಧಿನಗರ ಕೆಪಿಎಸ್ ಶಾಲಾ ವಠಾರ ಮತ್ತು ಆಟದ ಮೈದಾನದ ಸ್ಥಳದಲ್ಲಿ ಸರ್ವೆ ಕಾರ್ಯ ಆ. ೧೯ ರಂದು ಬೆಳಿಗ್ಗೆ ೧೧ ಗಂಟೆಗೆ ಆರಂಭ ಗೊಂಡು ಮದ್ಯಾಹ್ನ ೨.೩೦ ರವರೆಗೆ ನಡೆಯಿತು.ಸುಮಾರು ೩ ಘಂಟೆಗಳ ಕಾಲ ಸುಧೀರ್ಘ ಸಮಯ ಡಿಜಿಪಿಎಸ್ ತಂತ್ರಜ್ಞಾನದ ಮೂಲಕ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದರು.
ಈ ಸಂದರ್ಭದಲ್ಲಿ ಎ ಡಿ ಎಲ್ ಅರ್ ಜಿನೇಶ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಸುಳ್ಯ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್, ಸುಳ್ಯ ತಾಲೂಕು ಕಚೇರಿ ಸರ್ವೆ ಅಧಿಕಾರಿ ಜಗದೀಶ್, ನ.ಪಂ. ಮುಖ್ಯ ಅಧಿಕಾರಿ ಬಸವರಾಜ್‌ರವರು ಸರ್ವೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಅಲ್ಲದೆ ಜಾಗದ ಬಗ್ಗೆ ತಕರಾರು ಇರುವ ಎರಡೂ ತಂಡದ ಸದಸ್ಯರುಗಳ ಸಮಕ್ಷಮದಲ್ಲಿ ಸರ್ವೆ ನಡೆಯಿತು. ಶಾಲಾ ಆಡಳಿತ ಸಮಿತಿಯ ಉಪಾಧ್ಯಕ್ಷ ಚಿದಾನಂದ ಕಾಯರ್ತೋಡಿ,ಮಾಜಿ ಅಧ್ಯಕ್ಷರುಗಳಾದ ಆರ್ ಕೆ ಮಹಮ್ಮದ್,ಪ್ರವೀಣ್ ನಾಯ್ಕ್, ಶಾಲಾ ಪ್ರಾಂಶುಪಾಲರು ಹಾಗೂ ಉಪ ಪ್ರಾಂಶುಪಾಲರಾದ ಜ್ಯೋತಿ ಲಕ್ಷ್ಮಿ, ಖಾಸಗಿ ಜಾಗದ ಮಾಲಕರುಗಳಾದ ಡಿ. ಕೆ. ಪ್ರದೀಪ್, ಸಂದೀಪ್, ಜೈದೀಪ್ ಸೇರಿದಂತೆ ಇನ್ನೂ ಅನೇಕ ಮಂದಿ ಸ್ಥಳೀಯರು ಉಪಸ್ಥಿತರಿದ್ದರು.
ಅಧಿಕಾರಿಗಳು ಶಾಲೆಯ ಮುಖ್ಯ ರಸ್ತೆಯಿಂದ ಸರ್ವೆ ಯನ್ನು ಆರಂಭಿಸಿ ಶಾಲಾ ವಠಾರದ ಸುತ್ತಲೂ ಮೂಲೆ ಮೂಲೆಗಳ ಮಾಹಿತಿ ಸಂಗ್ರಹ ಮಾಡಿದರು.
ಬಳಿಕ ಶಾಲಾ ಆಟದ ಮೈದಾನದ ಬಳಿಯಿಂದ ಅಂಗನವಾಡಿ ಕೇಂದ್ರ, ಬಳಿಕ ಶಾಲಾ ಮೈದಾನದ ಪಕ್ಕದಲ್ಲಿರುವ ಪ್ರದೀಪ್ ರವರ ಜಾಗದ ಮೂಲ ಗುರುತುಗಳಲ್ಲಿ ಮತ್ತು ಅವರ ಕೈಯಲ್ಲಿರುವ ದಾಖಲೆಗಳ ಪ್ರಕಾರದ ಸ್ಥಳಗಳಲ್ಲಿ ಸರ್ವೆ ಕಾರ್ಯ ನಡೆಸಿ ದಾಖಲೆ ಸಂಗ್ರಹಿಸಿ ಕ್ಕೊಂಡರು.
ಸರ್ವೆಯಲ್ಲಿ ಪ್ರಸ್ತುತ ಇರುವ ಜಾಗದ ಗುರುತು ಮತ್ತು ಇತ್ತಂಡಗಳ ಬಳಿ ಇರುವ ಜಾಗದ ದಾಖಲೆ ಪತ್ರಗಳಿಗೆ ಅನುಸಾರವಾಗಿ ಸರ್ವೆ ಮಾಡಿದ ಅಧಿಕಾರಿಗಳು ಮಾಡಿದ ಸರ್ವೆ ಪಟ್ಟಿ ಯನ್ನು ತಹಶೀಲ್ದಾರ್ ರವರ ಆಗಮನ ಬಳಿಕ ಅವರ ಗಮನಕ್ಕೆ ನೀಡಿದರು.









ತಹಶೀಲ್ದಾರ್ ಆಗಮನ, ದಾಖಲೆ ಪರಿಶೀಲನೆ, ತಮ್ಮ ತಮ್ಮ ಬೇಡಿಕೆಯನ್ನು ಮುಂದಿಟ್ಟ ಎರಡೂ ತಂಡದ ಸದಸ್ಯರುಗಳು
ತಹಶೀಲ್ದಾರ್ ಮಂಜುಳಾ ರವರು ಮದ್ಯಾಹ್ನ ೨.೩೦ ರ ವೇಳೆಗೆ ಸ್ಥಳಕ್ಕೆ ಆಗಮಿಸಿದರು.
ಈ ವೇಳೆ ಸರ್ವೆ ಅಧಿಕಾರಿಗಳು ಅವರು ಮಾಡಿರುವ ಸರ್ವೆಯ ವರದಿಯನ್ನು ತಹಶೀಲ್ದಾರ್ ರವರ ಗಮನಕ್ಕೆ ನೀಡಿ ಮಾಹಿತಿಯನ್ನು ಕೊಟ್ಟರು.
ಈ ವೇಳೆ ಎರಡೂ ತಂಡದ ಸದಸ್ಯರುಗಳು ತಮ್ಮ ತಮ್ಮ ಬೇಡಿಕೆಯನ್ನು ತಹಶೀಲ್ದಾರರ ಮುಂದಿಟ್ಟು ಶಾಲೆಯವರು ‘ನಮಗೆ ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳದ ಕೊರತೆ ಆಗಿದೆ. ಅಲ್ಲದೆ ಶಾಲೆಯ ಸುಮಾರು ಸ್ಥಳವನ್ನು ರಸ್ತೆಗೆ ಮತ್ತು ಇನ್ನಿತರ ಉದ್ದೇಶ ದಿಂದ ಬೇರೆಯವರು ಅಕ್ರಮವಾಗಿ ಬಳಸಲು ಪ್ರಯತ್ನ ಮಾಡುತಿದ್ದು ನಮಗೆ ಸಮಸ್ಯೆ ಆಗುತ್ತಿದೆ. ಆದ್ದರಿಂದ ನಮ್ಮ ಶಾಲಾ ಜಾಗವನ್ನು ಉಳಿಸಿ ಕೊಡುವಂತೆ ಅವರು ಕೇಳಿ ಕ್ಕೊಂಡರು.ಅಲ್ಲದೆ ಇಲ್ಲಿ ಏಕಾ ಏಕಿ ಯಾಗಿ ಜಲ್ಲಿ ಸುರಿದು ರಸ್ತೆ ಮಾಡಲು ಹೊರಟಿದ್ದಾರೆ.ಇದನ್ನು ಕೂಡಲೇ ನಿಲ್ಲಸ ಬೇಕು ಮತ್ತು ಮುಂದೆ ರಸ್ತೆ ಮಾಡ ದಂತೆ ತಾವುಗಳು ಸೂಚನೆ ಯನ್ನು ನೀಡಬೇಕು ಎಂದು ಮನವಿ ಮಾಡಿಕ್ಕೊಂಡರು.
ಇದಕ್ಕೆ ಪ್ರದೀಪ್ ರವರು ಇವರು ಶಾಲೆ ಯವರು ಸುಮ್ಮ ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಾ ಬರುತ್ತಿದ್ದು ನಾವು ಯಾರ ಜಾಗವನ್ನು ಅಕ್ರಮ ಮಾಡಿಲ್ಲ. ನಮ್ಮ ದೇ ಸುಮಾರು ಜಾಗವನ್ನು ಶಾಲೆ ಯವರು ಬಳಸಿ ಕ್ಕೊಂಡಿದ್ದಾರೆ. ನಮ್ಮ ಹಿರಿಯರು ಶಾಲೆಗೆ ಜಾಗವನ್ನು ಮಾಡಿ ಕೊಟ್ಟವರು. ಅದನ್ನು ಸರಿಯಾದ ರೀತಿಯಲ್ಲಿ ಶಾಲೆಯವರು ಕಾಪಾಡಿ ಕೊಳ್ಳಲಿಲ್ಲ.ನಮ್ಮ ಜಾಗದ ಬಗ್ಗೆ ಎಲ್ಲಾ ದಾಖಲೆಗಳು ನಮ್ಮಲ್ಲಿ ಇದೆ.ಅಲ್ಲದೆ ಕೆಲವೊಂದು ಜಾಗದ ಬಗ್ಗೆ ಈಗಲೂ ನ್ಯಾಯಾಲಯ ದಲ್ಲಿ ದಾವೆ ನಡೆಯುತ್ತಿದೆ. ಆದ್ದರಿಂದ ನಮ್ಮ ಜಾಗ ಏನು ಇದೆಯೋ ಅದನ್ನು ನಮಗೆ ಕೊಡಲೇ ಬೇಕು ಮತ್ತು ಸಾರ್ವಜನಿಕ ರಸ್ತೆಯೊಂದು ಈ ಭಾಗದಲ್ಲಿ ಬೇಕು ಎಂದು ಸಾರ್ವಜನಿಕರು ಅಗ್ರಹ ಮಾಡುತ್ತಿದ್ದಾರೆ.ಅದೆಲ್ಲಾ ಮುಂದಿನ ದಿನದಲ್ಲಿ ಆಗಬೇಕು ಎಂದು ತಮ್ಮ ಮನವಿ ಯನ್ನು ತಹಶೀಲ್ದಾರ್ ರವರ ಗಮನಕ್ಕೆ ತಂದರು.

ಎರಡೂ ತಂಡದ ಸದಸ್ಯರ ಮಾತುಗಳನ್ನು ಆಲಿಸಿದ ತಹಶೀಲ್ದಾರ್ ‘ತಾವುಗಳು ತಮ್ಮಲ್ಲಿರುವ ಈ ಜಾಗದ ಬಗೆಗಿನ ಎಲ್ಲಾ ದಾಖಲೆ ಪತ್ರ ಮತ್ತು ನ್ಯಾಯಾಲಯ ದಿಂದ ಆದೇಶವಾಗಿ ಬಂದಿರುವ ಎಲ್ಲಾ ಆದೇಶ ಪತ್ರಗಳನ್ನು ನಮ್ಮ ಕಚೇರಿಗೆ ತನ್ನಿ.
ಬಳಿಕ ಈ ಬಗ್ಗೆ ಹಾಗೂ ಇಂದು ಅಧಿಕಾರಿಗಳು ನಡೆಸಿರುವ ಸರ್ವೆ ಬಗ್ಗೆ ಎಲ್ಲಾ ಮಾಹಿತಿಗಳ ವಿವರ ದ ವರದಿಯನ್ನು ಪರಿಶೀಲನೆ ಮಾಡಿ ಬಳಿಕ ಮೇಲಿನ ಅಧಿಕಾರಿಗಳ ಗಮನಕ್ಕೆ ಅದನ್ನು ನೀಡುವುದು ಮತ್ತು ಈ ಬಗ್ಗೆ ಎಲ್ಲರನ್ನು ಸೇರಿಸಿ ಒಂದು ಸಭೆ ಮಾಡಿ ಚರ್ಚೆ ಮಾಡುವ ವ್ಯವಸ್ಥೆಯನ್ನು ಮಾಡುವ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಉಮ್ಮರ್, ಶಾಫಿ ಕುತ್ತಮೊಟ್ಟೆ, ಚಿದಾನಂದ ಕುದ್ಪಾಜೆ ಮೊದಲಾದವರು ಮಾತನಾಡಿ, ಈ ಭಾಗದಲ್ಲಿ ಸುಮಾರು ಮನೆಗಳು ಇದ್ದು ರಸ್ತೆ ಇಲ್ಲದೆ ತೊಂದರೆ ಆಗುತ್ತಿದೆ. ಆದ್ದರಿಂದ ನಮಗೆ ಒಂದು ರಸ್ತೆಯನ್ನು ಇಲ್ಲಿ ಮಾಡುವ ಅವಕಾಶ ಮಾಡಿ ಕೊಡಬೇಕೆಂದು ತಹಶೀಲ್ದಾರ್‌ರವರ ಬಳಿ ಮನವಿಯನ್ನು ಮಾಡಿಕೊಂಡರು.
ವಿವಾದ ವಿರುವ ಸ್ಥಳದಲ್ಲಿ ಸರ್ವೆ ಕಾರ್ಯ ನಡೆಯುವ ಮಾಹಿತಿ ತಿಳಿದ ಸಾರ್ವಜನಿಕರು ಹೆಚ್ಚಿನ ಸಂಖೆಯಲ್ಲಿ ಬಂದು ಜಮಾಯಿಸಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು ನಿಗಾ ವಹಿಸಿದ್ದರು.










