ಸುಳ್ಯದ ಉದ್ಯಮಿ ಅನ್ಸಾರಿಯಾ ಎಜುಕೇಶನ್ ಸೆಂಟರ್ ನಿರ್ದೇಶಕ, ಅನ್ಸಾರ್ ಕಾರ್ಯದರ್ಶಿ ಕೆ ಬಿ ಸಂಶುದ್ದೀನ್ ರವರು ಇರಾಕ್ ನ ಬಾಗ್ದಾದ್ ಮತ್ತು ಓಮಾನ್ ದೇಶಗಳಿಗೆ ಝಿಯಾರತ್ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ.









ಇದರ ಅಂಗವಾಗಿ ಅವರನ್ನು ಅ.18 ರಂದು ಹರ್ಲಡ್ಕ ವಿಲ್ಲಾದಲ್ಲಿ ಬಿಳ್ಕೋಡುಗೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಅನ್ಸಾರಿಯಾ ಎಜುಕೇಶನ್ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ,ಗಾಂಧಿನಗರ ಜಮಾಯತ್ ಕಮಿಟಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ ಮಂಗಳೂರಿನ ಅಲ್ ಸಲಾಮ ಕೌನ್ಸಿಲಿಂಗ್ ನ ಶೇಖ್ ಇರ್ಪಾನ್ ಪೈಝಿ ಅಲ್ ಸಲಾಮ ಕೌನ್ಸಿಲಿಂಗ್ ಸೆಂಟರ್, ಸಲ್ಮಾನ್ ಪಾರಿಝ್ ಕೌನ್ಸಿಲಿಂಗ್ ಉಸ್ತಾದ್, ಅಶ್ರಫ್ ಪುತ್ತೂರು, ಅಬೀದ್ ಕಲ್ಲುಮುಟ್ಲು,ಅರಿಶ್ ಬೊರುಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು
ಪತ್ರಕರ್ತ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ವಂದಿಸಿದರು.










