ಆ.20:ಸುಳ್ಯ ರೈತ ಉತ್ಪಾದಕ ಕಂಪನಿಯ ಮಹಾಸಭೆ

0

ಹಣ್ಣಿನ‌ ಗಿಡಗಳ ಮಾರಾಟ ಮತ್ತು ಪ್ರದರ್ಶನ

ಸುಳ್ಯ ರೈತ ಉತ್ಪಾದಕ ಕಂಪೆನಿಯ 4 ನೇ ವಾರ್ಷಿಕ ಮಹಾಸಭೆ ಯು ಆ.20ರಂದು ಬೆಳಗ್ಗೆ 10.30 ಕ್ಕೆ ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿದೆ. ಕಂಪೆನಿಯ ಅಧ್ಯಕ್ಷರಾದ ವೀರಪ್ಪ ಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಕೃಷಿ‌ ಇಲಾಖೆಯ ಜಂಟೀ ನಿರ್ದೇಶಕರಾದ ಹೊನ್ನಪ್ಪ ಗೋವಿಂದೇ ಗೌಡ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಡಿ. ಮಂಜುನಾಥ್, ಅಟಲ್ ಇನ್ಕ್ಯೂಲೇಶನ್ ಸೆಂಟರ್ ನಿಟ್ಟೆ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎ.ಪಿ. ಆಚಾರ್ ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ಹಣ್ಣಿನ ಗಿಡಗಳ‌ ಮಾರಾಟ ಮತ್ತು ಪ್ರದರ್ಶನ ಇತ್ಯಾದಿಗಳು ನಡೆಯುವುದು.