ಸುಳ್ಯ ದಸರಾ ಸಮಿತಿಯ ಪೂರ್ವಭಾವಿ ಸಭೆ

0

ಸೆಪ್ಟೆಂಬರ್ ೨೯ ರಿಂದ ಸುಳ್ಯ ದಸರಾ ಹಬ್ಬ ಪ್ರಾರಂಭಗೊಳ್ಳಲಿದ್ದು, ದಸರಾ ಉತ್ಸವ ಸಮಿತಿಯ ಜಂಟಿ ಸಭೆಯು ದಸರಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕರ ಅಧ್ಯಕ್ಷತೆಯಲ್ಲಿ ಆಗಸ್ಟ್ ೨೫ ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಉತ್ಸವ ಸಮಿತಿ ಅಧ್ಯಕ್ಷ ಡಾ. ಲೀಲಾಧರ ಡಿ.ವಿ.ಯವರು ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಭೆಗೆ ವಿವರಿಸಿದರು. ಕಾರ್ಯಕ್ರಮದ ಬಗ್ಗೆ ಎಂ. ವೆಂಕಪ್ಪ ಗೌಡರು, ದಸರಾ ಸಮಿತಿ ಗೌರವ ಅಧ್ಯಕ್ಷ ಗೋಕುಲದಾಸ್, ದಸರಾ ಉತ್ಸವ ಸಮಿತಿ ಮಹಿಳಾ ಗೌರವಾಧ್ಯಕ್ಷೆ ಯಶೋದಾ ರಾಮಚಂದ್ರ, ಅಧ್ಯಕ್ಷೆ ಲತಾ ಮಧುಸೂದನ್ ಮಾತನಾಡಿದರು. ದಸರಾ ಉತ್ಸವ ಸಮಿತಿ ಕೋಶಾಧಿಕಾರಿ ಬೆಳ್ಯಪ್ಪ ವೇದಿಕೆಯಲ್ಲಿ ಇದ್ದರು.

ಕಾರ್ಯಕ್ರಮದ ಒಟ್ಟು ವಿವರವನ್ನು ಅಧ್ಯಕ್ಷ ನಾರಾಯಣ ಕೇಕಡ್ಕ ಸಭೆಯ ಮುಂದೆ ವಿವರಿಸಿದರು. ಮಹಿಳಾ ಸಮಿತಿ ವತಿಯಿಂದ ೩ ಜನರನ್ನು ಅದೃಷ್ಟ ಚೀಟಿ ಮೂಲಕ ಆಯ್ಕೆ ಮಾಡಿ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಎಂ ಕೆ ಸತೀಶ್, ರಾಜು ಪಂಡಿತ್, ಅಶೋಕ್ ಪ್ರಭು ಉಪಸ್ಥಿತರಿದ್ದರು. ರಾಜು ಪಂಡಿತ್ ಎಲ್ಲರನ್ನು ಸ್ವಾಗತಿಸಿ, ಸುನಿಲ್ ಕೇರ್ಪಳ ವಂದಿಸಿದರು. ರಾಧಾಕೃಷ್ಣ ರೈ ಬೂಡು ಕಾರ್ಯಕ್ರಮ ನಿರೂಪಿಸಿದರು.