ಸುಬ್ರಹ್ಮಣ್ಯ ರೋಟರಿ ಕ್ಲಬ್, ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್, ಇನ್ನರ್ವೆಲ್ ಕ್ಲಬ್, ವಿಕ್ರಮ ಯುವಕ ಮಂಡಲ ಬಳ್ಪ, ಶಾಸ್ತವೂ ಭಜನಾ ಮಂಡಳಿ ಬಳ್ಪ ಇವುಗಳ ಸಂಯುಕ್ತ ಆಶಯದಲ್ಲಿ ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯವರ ಸಹಯೋಗದಲ್ಲಿ ಆಗಸ್ಟ್ 31ರಂದು ಬಳ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ ಜರಗಲಿರುವುದು.









ಈ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಹೃದ್ರೋಗ ವಿಭಾಗ,ಕಿವಿ ಗಂಟಲು ಮೂಗು ವಿಭಾಗ, ನೇತ್ರ ವಿಭಾಗ, ಚರ್ಮರೋಗ ವಿಭಾಗ,ಸ್ತ್ರೀರೋಗ ವಿಭಾಗ,ಚಿಕ್ಕ ಮಕ್ಕಳ ವಿಭಾಗ, ಜನರಲ್ ವೈದ್ಯಕೀಯ ವಿಭಾಗ ಗಳಲ್ಲಿ ಕೆವಿಜಿ ಆಸ್ಪತ್ರೆಯ ವೈದ್ಯರು ತಪಾಸಣೆಯನ್ನ ನಡೆಸಲಿರುವರು . ಶಿಬಿರ ವನ್ನು ಊರಿನ ಹಿರಿಯರಾದ ಎಣ್ಣೆ ಮಜಲು ಪಟೇಲ್ ಪುಟ್ಟಣ್ಣ ಗೌಡರು ಉದ್ಘಾಟಿಸಲಿರುವರು. ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಅಧ್ಯಕ್ಷತೆ ವಹಿಸಲಿರುವರು.ಮುಖ್ಯ ಅತಿಥಿಯಾಗಿ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ಹಾಗೆ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರುಗಳು ಉಪಸ್ಥಿತರಿರುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಯೋನವನ್ನು ಪಡೆದುಕೊಳ್ಳಬೇಕಾಗಿ ಸಂಕಟಕರು ತಿಳಿಸಿರುತ್ತಾರೆ










