ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು; ನೃತ್ಯ ವೈಭವ, ತೆಲಿಕೆ ಬಂಜಿ ನಿಲಿಕೆ- ಕಾಮಿಡಿ ಶೋ
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27 ರಂದು ದುಗ್ಗಲಡ್ಕದ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಬೆಳಿಗ್ಗೆ ಧ್ವಜಾರೋಹಣ, ಸ್ಥಳ ಶುದ್ಧಿ, ಗಣಪತಿ ಪ್ರತಿಷ್ಠೆ, ಗಣಪತಿ ಹವನ, ಮಕ್ಕಳಿಗೆ ಅಕ್ಷರಾಭ್ಯಾಸ, ಭಜನಾ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದುಗ್ಗಲಡ್ಕ ಅಂಗನವಾಡಿ ಪುಟಾಣಿಗಳಿಂದ ಮತ್ತು ಸ್ಥಳೀಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು,ಅಪರಾಹ್ನ 2ರಿಂದ
ಭ್ರಾಮರಿ ನಾಟ್ಯಾಲಯ ಕುಕ್ಕುಜಡ್ಕ ಇದರ ವಿದುಷಿ ಜಯಶ್ರೀ ತೇಜಸ್ವಿ ಮತ್ತು ತಂಡದವರು ಪ್ರಸ್ತುತ ಪಡಿಸುವ “ನೃತ್ಯ ವೈಭವ” ಹಾಗೂ ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ ಸಾರಥ್ಯದ “ಮಸ್ಕಿರಿ ಕುಡ್ಲ” ತಂಡದ ರಂಗ್‌ದ ರಾಜೆ ಸುಂದರ್ ರೈ ಮಂದಾರ, ಕುಸಾಲ್ದ ಮುತ್ತು ಅರುಣ್‌ಚಂದ್ರ ಬಿ.ಸಿ.ರೋಡ್, ರಂಜನ್ ಬೋಳೂರು ಅಭಿನಯದ “ತೆಲಿಕೆ ಬಂಜಿ ನಿಲಿಕೆ” ಕಾಮಿಡಿ ಶೋ ನಡೆಯಿತು.ಸಂಜೆ ಗಂಟೆ 6 ರಿಂದ ವೈಭವದ ಶೋಭಾಯಾತ್ರೆ ನಡೆದು ಕಂದಡ್ಕ ಹೊಳೆಯಲ್ಲಿ ಜಲಸ್ಥಂಭನಗೊಂಡಿತು.
















ಧಾರ್ಮಿಕ ಸಭಾ ಕಾರ್ಯಕ್ರಮ;
ಮಧ್ಯಾಹ್ನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಹರಿಣಿ ಪುತ್ತೂರಾಯ ಧಾರ್ಮಿಕ ಉಪನ್ಯಾಸ ನೀಡಿದರು. ಸಭಾಧ್ಯಕ್ಷತೆಯನ್ನು ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ.ನೀರಬಿದಿರೆ ವಹಿಸಿದ್ದರು. ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕುದ್ಪಾಜೆ, ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಶ್ರೀ ದುಗ್ಗಲಾಯ ದೈವಸ್ಥಾನ ಸಮಿತಿ ಗೌರವಾಧ್ಯಕ್ಷ ಸುಂದರ ರಾವ್ ಕೊಡೆಂಚಡ್ಕ, ಅಧ್ಯಕ್ಷ ಕುಶಾಲಪ್ಪ ಗೌಡ ಕಜೆ, ಭಾಜಪ 1ನೇ ವಾರ್ಡ್ ಸಮಿತಿ ಅಧ್ಯಕ್ಷ ದಿನೇಶ್ ಡಿ.ಕೆ.ದುಗ್ಗಲಡ್ಕ, ದುಗ್ಗಲಾಯ ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ರೈ ದುಗ್ಗಲಡ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮಿತಿಯ ಗೌರವ ಸಲಹೆಗಾರರಾದ ಯತೀಶ್ ರೈ ದುಗ್ಗಲಡ್ಕ ಸ್ವಾಗತಿಸಿ, ರೂಪೇಶ್ ನೀರಬಿದಿರೆ ವಂದಿಸಿದರು, ಶೇಖರ್ ಕುದ್ಪಾಜೆ ಮತ್ತು ಯತೀಶ್ ರೈ ಕಾರ್ಯಕ್ರಮ ನಿರೂಪಿಸಿದರು.










