














ಮುಕ್ಕೂರು : ಕುಂಡಡ್ಕ -ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ವಠಾರದಲ್ಲಿ ನಡೆದ 16 ನೇ ವರ್ಷದ ಗಣೇಶೋತ್ಸವ ಆಚರಣೆಯ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಬುಧವಾರ ಸಂಜೆ ನಡೆಯಿತು.

ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಅನವುಗುಂಡಿ, ಮಾಜಿ ಅಧ್ಯಕ್ಷ ಯಶವಂತ ಜಾಲು, ಮುಕ್ಕೂರು ಅಂಗನವಾಡಿ ಶಿಕ್ಷಕಿ ರೂಪಾ, ಸುಳ್ಯ ಅಮರ ಸಂಘಟನೆಯ ಅಧ್ಯಕ್ಷ ಕುಸುಮಾಧರ ಪೂಜಾರಿ ಮುಕ್ಕೂರು, ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು, ಮುಕ್ಕೂರು ಶ್ರೀ ಉಳ್ಳಾಲ್ತಿ ಭಕ್ತವೃಂದದ ಸದಸ್ಯ ಉಮೇಶ್ ನಳೀಲು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ದೀಕ್ಷಾ ನೀರ್ಕಜೆ ನಿರೂಪಿಸಿದರು.











