ಒಂಬತ್ತನೇ ತರಗತಿಯ ಹುಡುಗನ ಕೈಯಲ್ಲಿ ಮೂಡಿಬಂದ ಗಣಪ

0

ಹುತ್ತದ ಮಣ್ಣು ಉಪಯೋಗಿಸಿ ಮಾಡಿದ ಗಣಪ

ಕಳಂಜ ಗ್ರಾಮದ ನಾಲ್ಗುತ್ತು ಎಂಬಲ್ಲಿ ಬಾಲಕನೋರ್ವ ಹುತ್ತದ ಮಣ್ಣು ಉಪಯೋಗಿಸಿ ಆಕರ್ಷಕವಾದ ಗಣಪತಿ ಮೂರ್ತಿಯನ್ನು ರಚಿಸಿದ್ದಾನೆ.

ಬೆಳ್ಳಾರೆ ಕೆ.ಪಿ.ಎಸ್ ನ ಒಂಬತ್ತನೇ ತರಗತಿಯ ಪ್ರಣಿತ್ ಕುಮಾರ್ ಎಂಬ ಬಾಲಕ ಹುತ್ತದ ಮಣ್ಣು ತಂದು ಅದನ್ನು ಹದ ಬರಿಸಿ ಗಣಪತಿ ಮೂರ್ತಿ ರಚನೆ ಮಾಡಿದ್ದಾನೆ.
ಅಲ್ಲದೆ ಆ.27 ರಂದು ಅದನ್ನು ಮನೆಯಲ್ಲೇ ಪ್ರತಿಷ್ಠಾಪಿಸಿ ಆ.29 ರಂದು ಸ್ಥಳೀಯವಾದ ನದಿಯಲ್ಲಿ ಜಲಸ್ತಂಭನ ಮಾಡಿದ್ದಾರೆ.


ಸುಮಾರು ಇಪ್ಪತ್ತು ದಿವಸದಲ್ಲಿ ಈ ಮೂರ್ತಿ ರಚನೆ ಮಾಡಿದ್ದು ಸ್ಥಳೀಯ ಬಾಲಕರಾದ ನಿಖಿಲ್, ಪೃಥ್ವಿನ್, ಅನುಷ್ ಮಣ್ಣು ತರಲು ಸಾಥ್ ಕೊಟ್ಟಿದ್ದಾರೆ. ಪ್ರಣೀತ್ ಅವರು ಪ್ರವೀಣ್ ಬೆಳ್ಳಾರೆ ಮತ್ತು ಶ್ರೀಮತಿ ಸುಮಿತ್ರಾ ದಂಪತಿಗಳ ಪುತ್ರ.