ದ.ಕ.ಜೇನು ಸೊಸೈಟಿ ಸಂಸ್ಕರಣ ಘಟಕಕ್ಕೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಭೇಟಿ

0

ದ. ಕ. ಜೇನು ಸೊಸೈಟಿ ಸಂಸ್ಕರಣ ಘಟಕಕ್ಕೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಎಸ್. ಆರ್ ಸೆ. 2 ರಂದು ಭೇಟಿ ನೀಡಿದರು.

ಮಾಧುರಿ ಜೇನು ಹಾಗೂ ಜೇನು ಚಾಕಲೇಟ್ ಬಗ್ಗೆ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಚಂದ್ರ ಕೋಲ್ಚಾರ್ ಅಧ್ಯಕ್ಷರನ್ನು ಸನ್ಮಾನಿಸಿದರು.

ಸರ್ಕಾರ ವತಿಯಿಂದ ಜೇನು ಚಾಕಲೇಟ್ ಖರೀದಿಗೆ ವ್ಯವಸ್ಥೆ ಮಾಡುವುದಲ್ಲದೆ ಇದು ಕೃಷಿಕರ ಬೆಳೆಗೆ ಪ್ರೇರಣೆ ನೀಡಬೇಕು, ತಾವೇ ಜೇನು ಚಾಕಲೇಟ್ ಖರೀದಿಸುವುದರ ಜೊತೆಗೆ ಬೇರೆ ಬೇರೆ ಕಡೆಗೆ ಚಾಕಲೇಟ್ ವ್ಯವಸ್ಥೆ ಮಾಡುತ್ತೇನೆ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜೇನು ಸೊಸೈಟಿಯ ಅಧ್ಯಕ್ಷ ಸಹಕಾರಿ ರತ್ನ ಚಂದ್ರ ಕೋಲ್ಚಾರ್, ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ಪದ್ಮನಾಭ ರೈ, ಸುಪ್ರೀತ್ ಮೋoಟಡ್ಕ ಹಾಗೂ ಜೇನು ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು.