








ಸಹಕಾರಿ ಸಂಘದಲ್ಲಿ ದುಡಿದು ನಿವೃತ್ತರಾಗಿ ವಿಶ್ರಾಂತ ಜೀವನದಲ್ಲಿಯೂ ಕೃಷಿ ಕ್ಷೇತ್ರದಲ್ಲಿ, ವಿವಿಧ ಉದ್ಯೋಗಳನ್ನು ಮಾಡಿ ಸಮಾಜದ ಇನ್ನುಳಿದವರಿಗೆ ಮಾದರಿಯಾಗಿ ದುಡಿದು ಇತ್ತೀಚೆಗೆ ನಿಧನ ಹೊಂದಿದ ಪಿಲಂಕುಜೆ ಮಾಯಿಲಪ್ಪ ಗೌಡರ ಶ್ರದ್ಧಾಂಜಲಿ ಸಭೆ ಮತ್ತು ವೈಕುಂಠ ಸಮಾರಾಧನೆಯು ನಿಂತಿಕಲ್ಲಿನ ಧರ್ಮಶ್ರೀ ಆರ್ಕೆಡ್ ನಲ್ಲಿರುವ ಸಭಾಂಗಣದಲ್ಲಿಸೆಪ್ಟೆಂಬರ್ ೨ ರಂದು ನಡೆಯಿತು. ಕಡೀರ ಬಾಲಕೃಷ್ಣ ಗೌಡರು ನುಡಿ ನಮನ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ಮೃತರ ಕುಟುಂಬ ಸದಸ್ಯರು, ಹಾಗೂ ಅವರ ಪತ್ನಿ ಮೋಹಿನಿ ಮಾಯಿಲಪ್ಪ, ಪುತ್ರ ಬಾಲಚಂದ್ರ ಸೊಸೆ ಕವಿತಾ ಬಾಲಚಂದ್ರ, ಪುತ್ರಿ ಪವಿತ್ರ ಲೋಕೇಶ್ ಅಳಿಯ ಲೋಕೇಶ್ ಉಪ್ಪಿನಂಗಡಿ, ಸಹೋದರರು, ಸಹೋದರಿಯರು, ಮೊಮ್ಮಕ್ಕಳು, ಹಿತೈಷಿಗಳು, ಉಪಸ್ಥಿತರಿದ್ದರು.










