ನಗರ ಪಂಚಾಯತ್ ಅಧ್ಯಕ್ಷರಿಂದ ಬೇಕಾಬಿಟ್ಟಿ ಆಡಳಿತ : ಮಾಜಿ ಅಧ್ಯಕ್ಷರಿಂದ ಗಂಭೀರ ಆರೋಪ

0

ಕಸ ಸಾಗಾಟ : ಅಧ್ಯಕ್ಷರ ಮೇಲೆ ಮುಗಿಬಿದ್ದ ಆಡಳಿತ

ಇಲ್ಲಿ ಆಡಿದ ಮಾತನ್ನು ದೇವಸ್ಥಾನದ ಎದುರು ಹೇಳಬೇಕು : ಅಧ್ಯಕ್ಷೆ ಶಶಿಕಲಾರಿಗೆ ಮಾಜಿ ಅಧ್ಯಕ್ಷ ವಿನಯ್ ಕಂದಡ್ಕ ಸವಾಲು

ಪ್ರತೀ ಬಾರಿ ಸುಳ್ಯ‌ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಚರ್ಚೆಗಳು ನಡೆಯುತ್ತಿದ್ದರೆ, ಈ ಬಾರಿ ಆಡಳಿತ ಸದಸ್ಯರ ಮಧ್ಯೆಯೇ ಕಸ ಸಾಗಾಟ ವಿಚಾರದಲ್ಲಿ ಚರ್ಚೆ ನಡೆದು ಪ್ರಮಾಣದ ಹಂತಕ್ಕೆ ತಲುಪಿದ ಘಟನೆಯೂ ವರದಿಯಾಗಿದೆ.

ಕಸ ಸಾಗಾಟಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಪ್ರೊಸಿಜರ್ ಪಾಲಿಸಿಲ್ಲ ಎಂದು ಮಾಜಿ ಅಧ್ಯಕ್ಷ ವಿನಯ ಕಂದಡ್ಕರು ವಿಷಯ ಆರಂಭಿಸಿದರು. ಇದೇ ವಿಚಾರ ಮುಂದುವರಿದು ವಿನಯ ಕಂದಡ್ಕರು ಹಾಗೂ ಅಧ್ಯಕ್ಷೆ ಶಶಿಕಲಾ ರವರ ಮಧ್ಯೆ ಬಾರೀ ಚರ್ಚೆ ನಡೆಯಿತು. ವಿನಯ ಕಂದಡ್ಕರ ಮಾತಿಗೆ ಆಡಳಿತ ಸದಸ್ಯರು ಸೇರಿಕೊಂಡರು.

ವಿಪಕ್ಷಗಳು ಕೂಡಾ ಕಸ ಸಾಗಾಟ ವಿಚಾರದಲ್ಲಿ ಮಾತನಾಡಿದರು.