ಲಯನ್ಸ್ ಕ್ಲಬ್ ಪಂಜ ಇದರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಸೆ.5 ರಂದು ಪಂಜ ಲಯನ್ಸ್ ಭವನದಲ್ಲಿ ನಡೆಯಿತು.

ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಲl ನಾಗೇಶ್ ಕಿನ್ನಿಕುಮೇರಿ ಸಭಾಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಣ್ಮೂರು ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಲl ಮೋಹನ್ ಏನಾಜೆ ಮತ್ತು ನಿವೃತ್ತ ಪ್ರಾಂಶುಪಾಲ ಲl ವೆಂಕಪ್ಪ ಗೌಡ ಕೇನಾಜೆ ರವರಿಗೆ ಸನ್ಮಾನ ನಡೆಯಿತು. ನಿವೃತ್ತ ಶಿಕ್ಷಕ
ಲl ಸೀತಾರಾಮ ಕುದ್ವ ಸನ್ಮಾನಿಸಿ ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಲl ಕರುಣಾಕರ ಎಣ್ಣೆಮಜಲು, ಕೋಶಾಧಿಕಾರಿ ಲl ವಾಸುದೇವ ಮೇಲ್ಪಾಡಿ, ಕಾರ್ಯಕ್ರಮ ನಿರ್ದೇಶಕ ಶಿಕ್ಷಕ ಲl ಪುರಂದರ ಪನ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ಶಿಕ್ಷಕರನ್ನು ಹೂ ನೀಡಿ ಗೌರವಿಸಲಾಯಿತು.
















ಕಾರ್ಯಕ್ರಮದಲ್ಲಿ.ಲl ಪುರಂದರ ಪನ್ಯಾಡಿ ಸ್ವಾಗತಿಸಿದರು. ಲl ಕುಮಾರ ಸ್ವಾಮಿ ಕಿನ್ನಿಕುಮೇರಿ ಸನ್ಮಾನಿತರ ಪರಿಚಯಿಸಿದರು. ಲl ಲಕ್ಷ್ಮಣ ಬೇರ್ಯ ಪ್ರಾರ್ಥಿಸಿದರು. ಲl ರಾಜೇಶ್ ರೈ ಧ್ವಜವಂದನೆ ಮಾಡಿದರು.ಲl ವಾಸುದೇವ ಮೇಲ್ಪಾಡಿ ವಂದಿಸಿದರು.










