ಯಾದವ ಸಭಾ ಪ್ರಾದೇಶಿಕ ಸಮಿತಿ ದುಗಲಡ್ಕ ಇದರ ಮಹಾಸಭೆ

0

ನೂತನ ಪದಾಧಿಕಾರಿಗಳ ಆಯ್ಕೆ

ಯಾದವ ಸಭಾ ಪ್ರಾದೇಶಿಕ ಸಮಿತಿ ದುಗಲಡ್ಕ ಇದರ ಮಹಾಸಭೆಯು ಸೆ. ೭ರಂದು ದಗಲಡ್ಕದ ದುಗ್ಗಲಾಯ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಯಾದವ ಸಭಾ ಪ್ರಾದೇಶಿಕ ಸಮಿತಿ ದುಗಲಡ್ಕ ಇದರ ದಿನೇಶ್ ದುಗಲಡ್ಕ ಅಧ್ಯಕ್ಷತೆ ವಹಿಸಿದ್ದರು. ಲತೀಶ್ ಡಿ.ಎಸ್. ವರದಿ ವಾಚಿಸಿದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ನಾರಾಯಣ ಮಣಿಯಾಣಿ ದುಗಲಡ್ಕ, ಕಾರ್ಯದರ್ಶಿಯಾಗಿ ಪ್ರವೀಣ್ ಮುಂಡೋಕಜೆ, ಕೋಶಾಧಿಕಾರಿಯಾಗಿ ಬಾಬು ಮಣಿಯಾಣಿ ದುಗಲಡ್ಕ, ಉಪಾಧ್ಯಕ್ಷರಾಗಿ ಸಂಧ್ಯಾ ರಾಜೇಶ್, ಜೊತೆ ಕಾರ್ಯದರ್ಶಿಯಾಗಿ ದೇವರಾಜ ನೀರಬಿದಿರೆ, ತಾಲೂಕು ಸಮಿತಿಗೆ ಚಂದು ಮಣಿಯಾಣಿ ಮುಂಡೋಕಜೆ, ರಾಘವ ಮಣಿಯಾಣಿ ಮುಂಡೋಕಜೆ, ಯಶೋದಾ ಬಾಳೆಕಜೆ, ಪ್ರೀತೇಶ್ ನಾರ್ಣಕಜೆ, ವಿನೋದ್ ದುಗಲಡ್ಕ, ರವಿಚಂದ್ರ ಮುಂಡೋಕಜೆ, ನಾರಾಯಣ ಮಣಿಯಾಣಿ ನೀರಬಿದಿರೆ, ಸೀತಾರಾಮ ಈಶ್ವರಡ್ಕ, ಶ್ರೀಮತಿ ಲೀಲಾ ಬಾಭು ಮಣಿಯಾಣಿ ದುಗಲಡ್ಕ, ಶ್ರೀಮತಿ ಲಕ್ಷ್ಮಿ ದಿನೇಶ್ ದುಗಲಡ್ಕ, ಗೋಪಾಲ ಈಶ್ವರಡ್ಕ, ದಿನೇಶ್ ಮಣಿಯಾಣಿ ಡಿ.ಕೆ., ಲತೀಶ್ ಬಿ.ಎಸ್., ಸುಬ್ರಹ್ಮಣ್ಯ ಕೊಳೆಂಜಿಕೋಡಿ ಇವರನ್ನು ಆಯ್ಕೆ ಮಾಡಲಾಯಿತು.
ನಂತರ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಸಂಧ್ಯಾ ರಾಜೇಶ್ ವಂದಿಸಿದರು.