ಯುವ ಶಕ್ತಿ ಪೈಂಟರ್ಸ್ ಅಸೋಸಿಯೇಷನ್ ವತಿಯಿಂದ ಶ್ರಮದಾನ ಮೂಲಕ ಬಣ್ಣ ಬಳಿದು ತರಗತಿ ಕೋಣೆ ಸ್ವಚ್ಛತೆ
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಅಮೃತ ಮಹೋತ್ಸವದ ಅಂಗವಾಗಿ ಶಾಲಾ ಪರಿಸರದ ಸ್ವಚ್ಛತಾ ಅಭಿಯಾನದ 6 ನೇ ವಾರದ ಶ್ರಮದಾನ ಸೆ. 7 ರಂದು ನಡೆಯಿತು.















ಯುವ ಶಕ್ತಿ ಪೈಂಟರ್ಸ್ ಅಸೋಸಿಯೇಶನ್ ಸುಳ್ಯ ಇದರ ವತಿಯಿಂದ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರುಗಳು ಭಾಗವಹಿಸಿ ಶ್ರಮದಾನ ಮೂಲಕ ಕಾಲೇಜು ತರಗತಿಯ ಮೂರು ಕೋಣೆಗಳಿಗೆ ಬಣ್ಣ ಬಳಿದು ಸ್ವಚ್ಛತೆ ಮಾಡಿದರು.

ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಶಾಲಾ ಪರಿಸರ ಸ್ವಚ್ಛತೆ, ಕಾಡು ಬಳ್ಳಿಗಳ ತೆರವು ಕಾರ್ಯ ಮಾಡುವ ಮೂಲಕ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ಬಡಿಗೇರ್, ಉಪಾಧ್ಯಕ್ಷ ಹಸೈನಾರ್ ಜಯನಗರ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ಉಪನ್ಯಾಸಕರುಗಳಾದ ರಾಧಾಕೃಷ್ಣ ಜೆ ಕೆ, ಸುರೇಶ್ ಬಿ,ಶ್ರೀಮತಿ ಅತುಲಾ ಪ್ರಭು, ಶ್ರೀಮತಿ ಮೀನಾಕ್ಷಿ, ಪೈಂಟರ್ಸ್ ಸಂಘದ ಅಧ್ಯಕ್ಷ ಕೆ ಸಿ ಜಗದೀಶ್, ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಜಟ್ಟಿಪಳ್ಳ, ಉಪಾಧ್ಯಕ್ಷರು ಹಾಗೂ ಎಸ್ ಡಿ ಎಂ ಸಿ ಸದಸ್ಯ ಕಬೀರ್ ಗಾಂಧಿನಗರ, ಹಾಗೂ ಸದಸ್ಯರುಗಳು ಮೊದಲಾದವರು ಉಪಸ್ಥಿತರಿದ್ದರು.
ಶ್ರಮದಾನ ಕಾರ್ಯಕ್ರಮ ಪ್ರತಿ ಭಾನುವಾರ ನಡೆಯಲಿದ್ದು ಶ್ರಮದಾನದಲ್ಲಿ ಭಾಗವಹಿಸಲು ಇಚ್ಛಿಸುವ ಸಂಘ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಯ ಅಭಿಮಾನಿ ಗಳು ಹಾಗೂ ಶಾಲಾ ಹಳೆವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸುವಂತೆ ಕೇಳಿಕ್ಕೊಂಡರು.










