ಸುಳ್ಯದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ರಾಜಶ್ರೀ ಕಾಂಪ್ಲೆಕ್ಸ್ ಗೆ ಸ್ಥಳಾಂತರ

0

ಸುಳ್ಯದ ಬಾಳೆಮಕ್ಕಿಯಲ್ಲಿರುವ ಕೃಷ್ಣ ಬಿಲ್ಡಿಂಗ್ ನಲ್ಲಿದ್ದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋಆಪರೇಟಿವ್ ಬ್ಯಾಂಕ್ ಶಾಖೆ ಪಕ್ಕದಲ್ಲಿರುವ ರಾಜಶ್ರೀ ಕಾಂಪ್ಲೆಕ್ಸ್ ಗೆ ಸ್ಥಳಾಂತರ ಗೊಳ್ಳುವ ಸಮಾರಂಭ ಇಂದು ( ಸೆ.8 ರಂದು) ನಡೆಯಿತು.


ಸುಳ್ಯ ಕ್ಷೇತ್ರದ ಶಾಸಕಿ ಕಿ.ಭಾಗೀರಥಿ ಮುರುಳ್ಯ ಸ್ಥಳಾಂತರಿತ ನೂತನ ಶಾಖೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.


ಭದ್ರತಾ ಕೊಠಡಿಯನ್ನು ಸಹಕಾರ ಇಲಾಖೆಯ ಉಪನಿಬಂಧಕರಾದ ರಮೇಶ್ ಎಚ್.ಎನ್. ಉದ್ಘಾಟಿಸಿದರು. ಸುಳ್ಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫರವರು ಕಂಪ್ಯೂಟರ್ ಉದ್ಘಾಟಿಸಿದರು. ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈಯವರು ವಾತಾನುಕೂಲಿ ವ್ಯವಸ್ಥೆಯನ್ನು ಉದ್ಘಾಟಿಸಿದರೆ, ಕಟ್ಟಡ ಮಾಲಕ ಕೃಷ್ಣ ರಾವ್ ಕ್ಯಾಶ್ ಕೌಂಟರನ್ನು ಉದ್ಘಾಟಿಸಿರು.

ರಾಮಕೃಷ್ಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಜೈರಾಜ್ ಬಿ.ರೈ ಅಧ್ಯಕ್ಷತೆ ವಹಿಸಿದ್ದರು. ನ.ಪಂ.ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ.ನೀರಬಿದಿರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸೊಸೈಟಿ ನಿರ್ದೇಶಕ ಹಾಗೂ ಸುಳ್ಯದ ಸಲಹಾ ಸಮಿತಿ ಅಧ್ಯಕ್ಷ ಪಿ.ಬಿ.ದಿವಾಕರ ರೈ, ನಿರ್ದೇಶಕ ದಯಾಕರ ಆಳ್ವ, ಸುಳ್ಯದ ಶಾಖಾ ಸಲಹಾ ಸಮಿತಿ ಸದಸ್ಯರಾದ ಗಂಗಾಧರ ರೈ, ಸನತ್ ಕುಮಾರ್ ರೈ, ದಯಾನಂದ ಆಳ್ವ, ಪಿ.ಬಿ.ಸುಧಾಕರ ರೈ, ಸುಧೀಶ್ ರೈಯವರ ಅವರ ಪತ್ನಿ ಅಕ್ಷತಾರವರುಗಳು ಭಾಗವಹಿಸಿದ್ದರು. ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಣೇಶ್ ಜಿ.ಕೆ., ಸುಳ್ಯ ಶಾಖಾ ಮೇನೇಜರ್ ಕರುಣಾಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಂಟರ ಭವನದ ಮೇನೇಜರ್ ಕುಸುಮಾಧರ ರೈ ಕಾರ್ಯಕ್ರಮ ನಿರೂಪಿಸಿದರು.