ಉಡುಪಿಯಲ್ಲಿ ಸೆ. ೬ ರಂದು ನಡೆದ ಪ್ರವೀಣ್ ಕುಮಾರ್ ಮೆಮೋರಿಯಲ್ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್- ೨೦೨೫ ರಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ೫ ನೇ ತರಗತಿ ವಿದ್ಯಾರ್ಥಿ ವಂಶಿಕ್ ಆರ್.ಗೆ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಲಭಿಸಿದೆ.















ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಅಂಡ್ ಆರ್ಟ್ಸ್ ಮಲ್ಪೆ ಡೊಜೊ ವತಿಯಿಂದ ಉಡುಪಿಯ ಅಮೃತ ಗಾರ್ಡನ್ ನಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ೧೦ ವರ್ಷದ ಒಳಗಿನವರ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಈತ ದೇವರಕೊಲ್ಲಿ ಮನೆಯ ದೇವಿಕಾ ಕೆ.ಜಿ ಮತ್ತು ರವಿಚಂದ್ರ ಪಿ. ದಂಪತಿಯ ಪುತ್ರ.










