ಬಸವೇಶ್ವರ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ

0

ಕುಲ್ಕುಂದ ಬಸವನಮೂಲದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸೆ.8 ರಂದು ಗ್ರಹಣ ಶಾಂತಿ ಹೋಮ ನಡೆಯಿತು.


ಚಂದ್ರಗ್ರಹಣದ ದೋಷ ಪರಿಹಾರಾರ್ಥ ಅನೇಕ ಭಕ್ತರು ಆಗಮಿಸಿ ಶಾಂತಿ ಹೋಮ ಮಾಡಿಸಿದರು.


ಗ್ರಹಣದ ಬಳಿಕ ಮರುದಿನ ಮುಂಜಾನೆ ದೇಗುಲದಲ್ಲಿ ಶುದ್ಧಿ ಕಾರ್ಯ ನಡೆಯಿತು.ಬಳಿಕ ಬೆಳಗಿನ ಮಹಾಪೂಜೆ ನೆರವೇರಿತು. ತದನಂತರ ಗ್ರಹಣ ಶಾಂತಿ ಹೋಮಕ್ಕೆ ಭಕ್ತರು ಸಂಕಲ್ಪ ನೆರವೇರಿಸಿದರು.ನಂತರ ದೇವಳದ ಪ್ರಧಾನ ಅರ್ಚಕ ಗಣೇಶ್ ದೀಕ್ಷಿತ್ ನೇತೃತ್ವದಲ್ಲಿ ಗ್ರಹಣ ಶಾಂತಿ ಹೋಮ ನೆರವೇರಿತು.


ಹೋಮದ ಪೂರ್ಣಾಹುತಿ ಬಳಿಕ ದೀಪಾರಾಧನೆಯುಕ್ತ ವಿಶೇಷ ಮಹಾಪೂಜೆ ಶ್ರೀ ದೇವರಿಗೆ ನೆರವೇರಿತು. ಬಳಿಕ ಸರ್ವರಿಗೂ ಪ್ರಸಾದ ವಿತರಿಸಲಾಯಿತು.
ಅಲ್ಲದೆ ಈ ಮೊದಲು ಅನೇಕ ಭಕ್ತರು ದೀಪ ಪ್ರಜ್ವಲನ ಸೇವೆಯನ್ನು ದೇವರಿಗೆ ಸಮರ್ಪಿಸಿದರು. ಅಲ್ಲದೆ ಅಕ್ಕಿ, ಎಳ್ಳೆಣ್ಣೆ, ಉದ್ದನ್ನು ಭಕ್ತರು ದೇವಳಕ್ಕೆ ಅರ್ಪಿಸಿದರು.
ನಂತರ ಅನ್ನಸಂತರ್ಪಣೆ ನೆರವೇರಿತು.