ಸುಳ್ಯ ನನ್ನ ತಾಯಿಯ ಊರು, ಇಲ್ಲಿಯ ಜನರ ಮನೆಮನೆಗಳಲ್ಲಿ ನಾವಿದ್ದೇವೆ: ಅಶೋಕ್ ರೈ
” ಸುಳ್ಯ ತಾಲೂಕು ಬಹಳ ಕ್ರಿಯಾಶೀಲರನ್ನೊಳಗೊಂಡ ಮತ್ತು ಉತ್ತಮ ಸ್ಥಿತಿವಂತರ ತಾಲೂಕು. ಸುಳ್ಯ ನನ್ನ ತಾಯಿಯ ಮನೆ . ಅಲ್ಲದೇ ಸುಳ್ಯ ಜನತೆಯ ಮನೆ ಮನೆಯಲ್ಲೂ ನಾವಿದ್ದೇವೆ. ಸುಳ್ಯದಲ್ಲಿ ಪ್ರಥಮವಾಗಿ ರೈ ಇಂಡೇಸ್ ಗ್ಯಾಸ್ ಏಜೆನ್ಸಿ ಮೂಲಕ ಸುಳ್ಯ ಮನೆ ಮನದಲ್ಲಿ ಪ್ರೀತಿ ಗಳಿಸಿದ್ದೇವೆ. ಆದುದರಿಂದ ಸುಳ್ಯದ ಅಪಾರ ಗೌರವ ಮತ್ತು ಪ್ರೀತಿ ನನ್ನ ಮೇಲಿದೆ. ಸುಳ್ಯದ ಜನತೆಯ ಪ್ರೀತಿ ನನಗೆ ಶ್ರೀರಕ್ಷೆ ” ಹೀಗೆಂದವರು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ.









ಅಸ್ತ್ರಸ್ಪೋರ್ಟ್ಸ್ ಕ್ಲಬ್ (ರಿ) ಪೈಚಾರ್ ಹಾಗೂ ಸುಳ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್ (S.B.A) ಇದರ ಸಹಭಾಗಿತ್ವದಲ್ಲಿ ಸುಳ್ಯದ
ಕುರುಂಜಿ ಭಾಗ್ ನಲ್ಲಿರುವ ಬ್ಯಾಡ್ಮಿಂಟನ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ
ಸುಳ್ಯ, ಕಡಬ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಆಹ್ವಾನಿತ ತಂಡಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಅಸ್ತ್ರಟ್ರೋಫಿ – 2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸುಳ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಅಕ್ಷಯ್ ಕೆ.ಸಿ. ಲೀಗ್ ಮಾದರಿಯ ಪಂದ್ಯಾಟವನ್ನು ಉದ್ಘಾಟಿಸಿದರು. ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರಿಪಾಯಿ ಪೈಚಾರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ನಗರ ಪಂಚಾಯತ್ ಮಾಜಿ ಸದಸ್ಯ ನಝೀರ್ ಶಾಂತಿನಗರ,ರಂಜಿತ್ ಗೌಡ ಎನ್ ಆರ್,ಪ್ರೀತಂ ,ಬಶೀರ್,ಅಂತರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಆಟಗಾರ ರಿಜ್ವಾನ್ ಅಹಮದ್ ಜನತಾ ,ಉದ್ಯಮಿ ಗುರು ವಿಕ್ರಮ್ ಪ್ರಸಾದ್,ಉದ್ಯಮಿ ಶಾಫಿ ಬೊಳುಬೈಲು ಮೊದಲಾದವರು ಉಪಸ್ಥಿತರಿದ್ದರು.










