ಕೋಟೆಮುಂಡುಗಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಹಾಸಭೆ

0

ಅಧ್ಯಕ್ಷರಾಗಿ ಹರಿಯಪ್ಪ ಎಂ.ಎಚ್. ಮುಂಡುಗಾರು, ಕಾರ್ಯದರ್ಶಿ ಜಗದೀಶ್ ಮುಂಡುಗಾರು

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡುಗಾರು ಇದರ ಮಹಾಸಭೆ, ಪದಾಧಿಕಾರಿಗಳ ಆಯ್ಕೆ ಸೆ.18 ರಂದು
ಯುವಕ ಮಂಡಲ ಕಳಂಜ ಇಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಹಾಲಿ ಅಧ್ಯಕ್ಷ ದಿವಾಕರ ಕಾವಿನಮೂಲೆ ವಹಿಸಿದ್ದರು. ವೇದಿಕೆಯಲ್ಲಿ ಗೌರವ ಅಧ್ಯಕ್ಷ ರಾಮಯ್ಯ ರೈ ಕಜೆಮೂಲೆ, ಕಾರ್ಯದರ್ಶಿ ಲಕ್ಷ್ಮೀ ಶ ಕಜೆಮೂಲೆ ಉಪಸ್ಥಿತರಿದ್ದರು. ಸಭೆಯಲ್ಲಿ ಸಮಿತಿಯ ಸದಸ್ಯರಾಗಿ ಇತ್ತೀಚೆಗೆ ನಿಧನರಾದ ದುಗ್ಗಪ್ಪ ಗೌಡ ಪಾಂಡಿಪಾಲು ಅವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಕೋರಲಾಯಿತು.

ಬಳಿಕ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಅಧ್ಯಕ್ಷರಾಗಿ ಹರಿಯಪ್ಪ ಮುಂಡುಗಾರು, ಕಾರ್ಯದರ್ಶಿಯಾಗಿ ಜಗದೀಶ್ ಮುಂಡುಗಾರು, ಕೋಶಾಧಿಕಾರಿಯಾಗಿ ಬಾಲಸುಬ್ರಹ್ಮಣ್ಯ ಪ್ರಭು, ಉಪಾಧ್ಯಕ್ಷರಾಗಿ ವಾಸುದೇವ ಬೋರ್ಕರ್ ಮುಂಡುಗಾರು, ಜತೆ ಕಾರ್ಯದರ್ಶಿಯಾಗಿ ನಾರಾಯಣ ಕೋಡಿಯಡ್ಕ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಿವಪ್ರಸಾದ್ ತಂಟೆಪ್ಪಾಡಿ , ಕ್ರೀಡಾ ಕಾರ್ಯದರ್ಶಿಯಾಗಿ ನಿತಿನ್ ತೋಟದಮೂಲೆ ಆಯ್ಕೆಯಾದರು.