ಉಬರಡ್ಕ ಮಿತ್ತೂರು ಗ್ರಾಮದ ವ್ಯಾಪ್ತಿಯ ಉದಯಗಿರಿ ಕಮಿಲಡ್ಕ ಶ್ರೀ ದುರ್ಗಾದೇವಿ ಮಂದಿರ, ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಹಾ ನವರಾತ್ರಿ ಉತ್ಸವವು
ಸೆ. 30 ರಂದು ಜರುಗಲಿರುವುದು.















ಸೆ. 22 ರಂದು ಪ್ರಾತಕಾಲ 5:00 ಗಂಟೆಗೆ ಶ್ರೀದೇವಿಯ ಗದ್ದಿಗೇರುವುದು , ಸೆ. 27 ರಂದು ಬೆಳಗ್ಗೆ ಗಂಟೆ 7:30 ರಿಂದ ಹೊಸ ಅಕ್ಕಿ ನವನ್ನ ಕದಿರು ಕಟ್ಟುವ ಕಾರ್ಯಕ್ರಮ ನಡೆಯಲಿದೆ.
ಸೆ. 30ರಂದು ಬೆಳಗ್ಗೆ ಗಂಟೆ 7.00 ರಿಂದ ಸ್ಥಳೀಯ ಭಜಕರಿಂದ ಭಜನಾ ಕಾರ್ಯಕ್ರಮ, ಬಳಿಕ 10 ಗಂಟೆಯಿಂದ ಶ್ರೀ ದುರ್ಗಾದೇವಿ ಮತ್ತು ಶ್ರೀ ಮಹಾವಿಷ್ಣುಮೂರ್ತಿ ದೈವದ ದರ್ಶನ ಸೇವೆಯು ದೇವಿಯ ಪಾತ್ರಿ ಧರ್ಮದರ್ಶಿಗಳಾದ ರವಿಪ್ರಸಾದ್ ಕಮಿಲಡ್ಕ ಹಾಗೂ ಮಹಾವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ನೇತೃತ್ವದಲ್ಲಿ ನಡೆಯಲಿದೆ. ಬಳಿಕ ಮಾರಿಕಳ ಪ್ರವೇಶವಾಗಿ ಹರಕೆಯ ತುಲಾಭಾರ ಸೇವೆ ಸಮರ್ಪಿಸುವುದು.
ಈ ಸಂದರ್ಭದಲ್ಲಿ ದೇವಿಗೆ ಹರಕೆ ಒಪ್ಪಿಸುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಲಿರುವುದು. ಸಂಜೆ ಗಂಟೆ 3.00 ರಿಂದ ಸಾಮೂಹಿಕ ಆಯುಧ ಪೂಜೆಯು ನಡೆಯಲಿರುವುದು. ಸಾಯಂಕಾಲ ಮಂಗಳ ಸ್ನಾನವಾಗಿ ಮಹಾನವರಾತ್ರಿ ಉತ್ಸವವು ಸಂಪನ್ನಗೊಳ್ಳಲಿರುವುದಾಗಿ ಧರ್ಮದರ್ಶಿಗಳಾದ ರವಿಪ್ರಸಾದ್ ಕಮಿಲಡ್ಕ
ರವರು ತಿಳಿಸಿದರು.










