ಮೈಸೂರು ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡ

0

ಕುಕ್ಕೆಶಿ ಸುಬ್ರಮಣ್ಯ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ಸಾಂಸ್ಕೃತಿಕ ತಂಡದಿಂದ ವಿಶ್ವ ಪ್ರಸಿದ್ಧ ಮೈಸೂರು ದಸರಾದ ಅಂಗವಾಗಿ ನಡೆಯುವ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಸೆ. 14 ರಂದು ಸಾಂಸ್ಕೃತಿಕ ಪ್ರದರ್ಶನವನ್ನು ನೀಡಿದೆ. ಸುಮಾರು 34 ವಿದ್ಯಾರ್ಥಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಪ್ರಾಂಶುಪಾಲರಾದ, ಡಾ. ದಿನೇಶ ಪಿ ಟಿ ಇವರ ಮಾರ್ಗದರ್ಶನದಲ್ಲಿ, ಸಾಂಸ್ಕೃತಿಕ ತಂಡದ ಸಂಯೋಜಕರಾದ ಡಾ. ವಿನ್ಯಾಸ್ ಹೊಸೊಳಿಕೆ, ಮತ್ತು ಸದಸ್ಯರಾದ ನಮಿತಾ ಮೆಲ್ನಾಡ್ ಮತ್ತು ಭರತ್ ಎಂ ಎಲ್ ಇವರ ನೇತೃತ್ವದಲ್ಲಿ, ತಂಡ ಪ್ರದರ್ಶನವನ್ನು ನೀಡಿತ್ತು. ನೃತ್ಯ ಸಂಯೋಜನೆಯನ್ನು ಪ್ರಮೋದ್ ರೈ ಬೆಳ್ಳಾರೆ ಮತ್ತು ಅಶೋಕ್ ಬೆಳ್ಳಾರೆ ಇವರು ಮಾಡಿದ್ದರು. ಚಿತ್ರ ಕಲಾವಿದರಾದ ಸತೀಶ್ ಪಂಜ ಇವರು ಮುಖವರ್ಣಿಕೆಯಲ್ಲಿ ಸಹಕರಿಸಿದ್ದರು. ತಂಡದ ಪ್ರದರ್ಶನ ವೀಕ್ಷಕರ ಮೆಚ್ಚುಗೆ ಗಳಿಸಿದೆ.