ಕೆ.ವಿ.ಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

0

23.97 ಕೋಟಿ ವ್ಯವಹಾರ, ಸದಸ್ಯರಿಗೆ 14 ಶೇಕಡಾ ಡಿವಿಡೆಂಡ್
ಸದಸ್ಯರ ಸಹಕಾರದಿಂದ ಸಂಸ್ಥೆ ಬೆಳೆದಿದೆ – ಡಾ. ರೇಣುಕಾಪ್ರಸಾದ್ ಕೆ ವಿ.

ಕಳೆದ 16 ವರ್ಷಗಳಲ್ಲಿ ಅಭಿವೃದ್ಧಿಯ ಪಥದಲ್ಲಿ ಸಂಘ ಮುನ್ನಡೆಯುತ್ತಿದ್ದು, 2024-25 ನೇ ಆರ್ಥಿಕ ವರ್ಷದಲ್ಲಿ ರೂ.4.85 ಕೋಟಿ ವಿವಿಧ ಠೇವಣಿಗಳನ್ನು ಸಂಗ್ರಹಿಸಿ ರೂ. 3.60 ಕೋಟಿ ಸಾಲ ವಿತರಿಸಿದೆ. ಒಟ್ಟಾರೆಯಾಗಿ 23.97 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, ರೂ. 23,17,291.48 ನಿವ್ವಳ ಲಾಭ ವನ್ನು ಗಳಿಸಿದೆ.

ಸದಸ್ಯರಿಗೆ 14 ಶೇಕಡಾ ಡಿವಿಡೆಂಡ್ ವಿತರಿಸಲಾಗುವುದು. ಸಹಕಾರಿಯ ಅಧ್ಯಕ್ಷರು ಹಾಗೂ ಎ.ಒ.ಎಲ್.ಇ ಬಿ ಕಮಿಟಿಯ ಕಾರ್ಯದರ್ಶಿಗಳಾದ ಡಾ. ಜ್ಯೋತಿ ಆರ್ ಪ್ರಸಾದ್‌ರವರು ನನ್ನ ಅನುಪಸ್ಥಿತಿಯಲ್ಲಿ ಎಲ್ಲಾ ವಿದ್ಯಾಸಂಸ್ಥೆಗಳ ಜೊತೆಗೆ ಸಹಕಾರಿ ಸಂಘವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಅದೇ ರೀತಿ ಸದಸ್ಯರ ಹಕಾರದಿಂದ ಸಂಸ್ಥೆ ಬೆಳೆದಿದೆ ಎಂದು ಸಂಘದ ಸ್ಥಾಪಕಾಧ್ಯಕ್ಷರು ಡಾ. ರೇಣುಕಾಪ್ರಸಾದ್ ಕೆ ವಿ ಹೇಳಿದರು. ಸೆ. 20 ರಂದು ಕೆ.ವಿ.ಜಿ ಐ.ಪಿ.ಎಸ್ ಸಭಾಂಗಣದಲ್ಲಿ ನಡೆದ ಕೆ.ವಿ.ಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆಯಲ್ಲಿ ಸಂಘದ ಸ್ಥಾಪಕಾಧ್ಯಕ್ಷರ ನೆಲೆಯಲ್ಲಿ ಡಾ. ರೇಣುಕಾಪ್ರಸಾದ್ ಕೆ. ವಿ ರವರು ಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆರಂಭದಲ್ಲಿ ವರದಿ ಸಾಲಿನಲ್ಲಿ ಮೃತಪಟ್ಟ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಿರ್ದೇಶಕರಾದ ಕಮಲಾಕ್ಷ ಎನ್ ಮಹಾಸಭೆಯ ನೋಟಿಸನ್ನು ಓದಿ ದಾಖಲಿಸಿದರು. ನಿರ್ದೇಶಕರಾದ ಪ್ರಸನ್ನಕುಮಾರ್ ಕೆ ರವರು 2024-25 ನೇ ಸಾಲಿನ ಮುಂಗಡ ಪತ್ರಕ್ಕಿಂತ ಹೆಚ್ಚುವರಿ ಖರ್ಚನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ನಿರ್ದೇಶಕರಾದ ನಾಗೇಶ್ ಕೆ ರವರು 2025-26 ನೇ ಸಾಲಿಗೆ ತಯಾರಿಸಿದ ಮುಂಗಡ ಪತ್ರವನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು. ಸಂಘದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಕರುಣಾಕರ ಕೆ ರವರು ವರದಿ ಸಾಲಿನ ಲೆಕ್ಕಪರಿಶೋಧನಾ ವರದಿ, ಉಪನಿಬಂಧನೆಗಳ ತಿದ್ದುಪಡಿ ಮತ್ತು ಸಾಲ ಮತ್ತು ಠೇವಣಾತಿ ನಿಯಮವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡರು.

ಸಹಕಾರಿಯ ಉಪಾಧ್ಯಕ್ಷರಾದ ವಸಂತ ಗೌಡ ಕಿರಿಬಾಗರವರು 2025-26 ಸಾಲಿನ ಲೆಕ್ಕಪರಿಶೋಧಕರ ನೇಮಕಾತಿ ಬಗ್ಗೆ ಸಭೆಯಲ್ಲಿ ಮಂಡಿಸಿದರು. ನಿರ್ದೇಶಕರಾದ ಡಾ. ಉಜ್ವಲ್ ಯು ಜೆ ರವರು ವರದಿ ಸಾಲಿನ ನಿವ್ವಳ ಲಾಭದ ಹಂಚಿಕೆಯನ್ನು ಸಭೆಗೆ ಮಂಡಿಸಿ ಮತ್ತು ಸಂಘದ ಸರ್ವತೋಮುಖನ ಅಭಿವೃದ್ದಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿರುವ ಗೌರವ ಸಲಹೆಗಾರರಾದ ಮನಮೋಹನ್ಕು ರುಂಜಿ ಮತ್ತು ಎಲ್ಲಾ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದರು. ಸಹಕಾರಿಯ ಲೆಕ್ಕಪರಿಶೋಧಕರಾದ ಶ್ರೀ ಅನಂತ ಪದ್ಮನಾಭರವರನ್ನು ಗೌರವಿಸಿ ಸನ್ಮಾನಿಸಲಾಯಿತು ಮತ್ತು ಸಾಲ ವಸೂಲಾತಿ ಸಮಿತಿಯ ಆರು ಜನ ಸದಸ್ಯರನ್ನು ಗೌರವಿಸಿ ಸನ್ಮಾನಿಸಿದರು. ಸಂಘದ 16 ನೇ ವರ್ಷದ ವಾರ್ಷಿಕ ಮಹಾಸಭೆಯ ಸವಿನೆನಪಿಗಾಗಿ ಸಭೆಗೆ ಆಗಮಿಸಿದ ಸದಸ್ಯರಲ್ಲಿ ಅದೃಷ್ಟ ಚೀಟಿಯ ಮೂಲಕ ಆಯ್ಕೆ ಮಾಡಿದ 16 ಸದಸ್ಯರಿಗೆ ಬಹುಮಾನವನ್ನು ಸಂಘದ ಸ್ಥಾಪಕಾಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ ಮತ್ತು ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಆರ್ ಪ್ರಸಾದ್‌ರವರು ವಿತರಿಸಿದರು.

ನಿರ್ದೇಶಕರಾದ ಮಾಧವ ಬಿ ಟಿ, ಪದ್ಮನಾಭ ಕಾನವುಜಾಲು, ಡಾ. ರೇವಂತ್ ಎಸ್ ಎಸ್, ದಯಾನಂದ ಎಮ್ ಎ, ಬಾಲಸುಬ್ರಹ್ಮಣ್ಯ ಕೆ ಬಿ, ದಿನೇಶ್ ಎಂ ಪಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಗೌರವ ಸಲಹೆಗಾರರು ಮತ್ತು ಆಡಳಿತ ಅಧಿಕಾರಿಯಾದ ಮನಮೋಹನ್ ಕುರುಂಜಿ, ಕೆ.ವಿ.ಜಿ ಡೆಂಟಲ್ಕಾ ಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಮೌರ್ಯ ಆರ್ ಕುರುಂಜಿ, ಸಂತೋಷ್ ಕುತ್ತಮೊಟ್ಟೆ, ಎಸ್ ಆರ್ ಸೂರಯ್ಯ, ದಯಾನಂದ ಕುರುಂಜಿ, ಬಾಲಗೋಪಾಲ ಸೇರ್ಕಜೆ, ಗಂಗಾಧರ ಪಿ ಎಸ್, ವಿನಯ್ ಕುಮಾರ್ ಮುಳುಗಾಡು, ಪದ್ಮನಾಭ ಪಾತಿಕಲ್ಲು, ದೀಪಕ್ ಕುತ್ತಮೊಟ್ಟೆ, ಪಿ ಎ ಮೊಹಮ್ಮದ್, ಶ್ರೀ ಜನಾರ್ಧನ ದೋಳ, ಮತ್ತಿತರು ಉಪಸ್ಥಿತರಿದ್ದರು. ನಿರ್ದೇಶಕರುಗಳಾದ ಡಾ. ಯಶೋದಾ ರಾಮಚಂದ್ರರವರು ಸ್ವಾಗತಿಸಿ, ಡಾ. ಮನೋಜ್ ಕುಮಾರ್ ಅಡ್ಡಂತಡ್ಕ ವಂದಿಸಿದರು.

ನಿರ್ದೇಶಕರಾದ ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣರಾಜ್ ಕೇರ್ಪಳ ಪ್ರಾರ್ಥಿಸಿದರು.