ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ವತಿಯಿಂದ ಸ್ವಚ್ಛತಾ ಮತ್ತು ಸ್ವಚ್ಛತಾ ಜಾಗೃತಿ ಕಾರ್ಯಕ್ರಮ

0

ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ವತಿಯಿಂದ ಸ್ವಚ್ಛತಾ ಮತ್ತು ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಸೆ.21 ರಂದು ಗುಂಡಡ್ಕ ಕಾಲೋನಿಯಲ್ಲಿ ನಡೆಯಿತು.

ಈ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಐವರ್ನಾಡು ಗ್ರಾಂ. ಪಂ. ನ ಪಿಡಿಒ ಆಗಿರುವ ಶ್ಯಾಮ್ ಪ್ರಸಾದ್ ಮಾಹಿತಿ ನೀಡಿದರು. ವೇದಿಕೆಯಲ್ಲಿ ಯುವಜನ ಸಂಯುಕ್ತ ಮಂಡಳಿಯ ಪೂರ್ವ ಅಧ್ಯಕ್ಷ ಶಿವಪ್ರಕಾಶ್ ಕಡಪಳ, ಉಸ್ತುವಾರಿ ನಿರ್ದೇಶಕ ಸತೀಶ್ ಮೂಕಮಲೆ, ವೀರ ಮಾರುತಿ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಶ್ರೇಯಸ್ ಮುತ್ಲಾಜೆ, ಕಾರ್ಯದರ್ಶಿ ವಿನ್ಯಾಸ್ ಕೊಚ್ಚಿ, ಕಾರ್ಯಕ್ರಮ ನಿರ್ದೇಶಕ ಅಚ್ಚುತ ಗುತ್ತಿಗಾರು ಉಪಸ್ಥಿತರಿದ್ದರು.

ವೀರ ಮಾರುತಿ ಸ್ಪೋರ್ಟ್ ಕ್ಲಬ್ ಪೂರ್ವ ಅಧ್ಯಕ್ಷ ವಿಜೇಶ್ ಹಿರಿಯಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಚ್ಚುತ ಗುತ್ತಿಗಾರು ವಂದಿಸಿದರು. ಕಾರ್ಯಕ್ರಮ ಬಳಿಕ ಸ್ವಚ್ಚತಾ ಕಾರ್ಯ ನಡೆಸಲಾಯಿತು.