ವಾಮoಜೂರ್ ನ ಎಸ್. ಡಿ. ಎಮ್. ಮಂಗಳ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಸೆ.19ರಂದು ನಡೆದ 14ರ ವಯೋಮಾನದ ಯೋಗ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ದ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ ಆರ್ಟಿಸ್ಟಿಕ್ ವೈಯಕ್ತಿಕ ವಿಭಾಗದಲ್ಲಿ ಹಾರ್ದಿಕ 7ನೇ ಪ್ರಥಮ, ಟ್ರೆಡಿಶನಲ್ ವಿಭಾಗ ಸೋನಾ ಅಡ್ಕರ್ 7ನೇ, ಆರ್ಟಿಸ್ಟಿಕ್ ಡಬಲ್ಸ್ ಹಾಗೂ ತಾಳಬದ್ದ ಡಬಲ್ಸ್ ವಿಭಾಗದಲ್ಲಿ ಹಾರ್ದಿಕ 7 ನೇ ಹಾಗೂ ಸೋನಾ ಅಡ್ಕಾರ್ 7 ನೇ ಪ್ರಥಮ, ಬಾಲಕರ ವಿಭಾಗದಲ್ಲಿ ಶ್ರೀಶೌರ್ಯ 6 ನೇ ಟ್ರಡಿಷನಲ್ ವಿಭಾಗ ದ್ವಿತೀಯ, ಆರ್ಕಿಸ್ಟಿಕ್ ಡಬಲ್ಸ್ ಶ್ರೀಶೌರ್ಯ 6ನೇ ಮತ್ತು ಅಕ್ಷರ್ 6ನೇ ದ್ವಿತೀಯ, ಸ್ಥಾನ ಪಡೆದುಕೊಂಡಿರುತ್ತಾರೆ.















ಪ್ರಥಮ ಸ್ಥಾನವನ್ನು ಪಡೆದಂತಹ ಸೋನಾ ಅಡ್ಕಾರ್ ಏಳನೇ ಇವರು ಕೃಷಿಕ ಹಾಗೂ ಉದ್ಯಮಿ ಶರತ್ ಅಡ್ಕಾರ್ ಮತ್ತು ಶೋಭಾ ದಂಪತಿಗಳ ಪುತ್ರಿ , ಹಾರ್ದಿಕ ಕೆ. ಕೆ 7 ನೇ ತರಗತಿ ಇವರು ಸುಳ್ಯ ತಾಲೂಕು ಆಫೀಸ್ ಉದ್ಯೋಗಿ ಕೃಷ್ಣಪ್ಪ ಗೌಡ ಕುರುಂಜಿಬಾಗ್ ಮತ್ತು ಪುಷ್ಪಾವತಿ ದಂಪತಿಗಳ ಪುತ್ರಿ. ಈ ಎರಡು ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿದ್ಯಾ ಸಂಸ್ಥೆಯ ಜೊತೆ ಕಾರ್ಯದರ್ಶಿ ಓಲ್ವಿನ್ ಎಡ್ವರ್ಡ್ ಡಿ ಕುನ್ಹ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ಇವರ ಮಾರ್ಗದರ್ಶನದಲ್ಲಿ ಸಂತೋಷ್ ಮುಂಡಕಜೆ ಹಾಗೂ ಶ್ರೀಮತಿ ಪ್ರಶ್ವಿಜ ಯೋಗ ತರಬೇತು ನೀಡಿ , ದೈಹಿಕ ಶಿಕ್ಷಣ ಶಿಕ್ಷಕರಾದ ಪುಷ್ಪವೇಣಿ ಹುದೇರಿ, ಕೊರಗಪ್ಪ ಬೆಳ್ಳಾರೆ, ಸಹಕರಿಸಿದರು.










