ಅಪ್ಲಾಸ್ಟಿಕ್ ಅನಿಮಿಯಾ ಕಾಯಿಲೆಯ ಚಿಕಿತ್ಸೆಗೆ ಬೇಕಾಗಿದೆ ರೂ. 25 ಲಕ್ಷ
ಸುಳ್ಯದ ಬಾಳಿಲ ಗ್ರಾಮದ ರಾಮಕುಮೇರಿ ನಿವಾಸಿ ಹರಿಪ್ರಸಾದ್ ಎಂಬವರು ಕಳೆದ 4 ತಿಂಗಳಿನಿಂದ ಅಪ್ಲಾಸ್ಟಿಕ್ ಅನಿಮಿಯಾ (ಪ್ಲೇಟ್ಲೆಟ್ ಕೊರತೆ) ಕಾಯಿಲೆಯಿಂದ ಬಳಲುತ್ತಿದ್ದು ಇದೀಗ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.















ವೈದ್ಯರು ಸೂಚಿಸಿದಂತೆ
ಚಿಕಿತ್ಸೆಗೆ ಅಂದಾಜು ವೆಚ್ಚ ರೂ. 20 ರಿಂದ 25 ಲಕ್ಷ ತಗುಲಬಹುದು ಎಂದು ತಿಳಿಸಿದ್ದು, ವೃತ್ತಿಯಲ್ಲಿ ಚಾಲಕನಾಗಿರುವ ಇವರಿಗೆ ಮನೆಯಲ್ಲಿ ವೃದ್ಧ ತಂದೆ- ತಾಯಿ ಮತ್ತು ಪತ್ನಿ ಹಾಗೂ 1ನೇ ಮತ್ತು 4 ನೇ ತರಗತಿಯಲ್ಲಿ ಕಲಿಯುತ್ತಿರುವ ಹೆಣ್ಣು ಮಕ್ಕಳನ್ನು ಹೊಂದಿದ್ದು ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಇದೀಗ ಮನೆಗೆ ಆಧಾರ ಸ್ಥಂಭವಾಗಿದ್ದ ಹರಿಪ್ರಸಾದ್ ರವರು ಹಾಸಿಗೆ ಹಿಡಿದಿರುವುದರಿಂದ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.
ಹರಿಪ್ರಸಾದ್ ರವರ ಆರೋಗ್ಯ ಸುಧಾರಿಸಲು ಚಿಕಿತ್ಸೆಗಾಗಿಸಹೃದಯಿ ದಾನಿಗಳ ನೆರವು
ಅವಶ್ಯಕತೆ ಇರುವುದು.
ದಯಮಯರಾದ ತಾವುಗಳು ಸಹಾಯ ಹಸ್ತ ಚಾಚಿ ಬಡಪಾಯಿ ಕುಟುಂಬಕ್ಕೆ
ಆಸರೆಯಾಗುವಂತೆ ಈ ಮೂಲಕ ಮನೆಯವರು ವಿನಂತಿಸಿಕೊಂಡಿರುತ್ತಾರೆ.
ನಗದು ಪಾವತಿ ಮಾಡುವ ಖಾತೆಯ ವಿವರ:
ಬ್ಯಾಂಕ್ ಹೆಸರು:
ಬ್ಯಾಂಕ್ ಆಫ್ ಬರೋಡಾ
ಖಾತೆ ಸಂಖ್ಯೆ: 71400100006697
ಖಾತೆ ಹೆಸರು:ಶ್ರೀಮತಿ ಚಲನ ಹರಿಪ್ರಸಾದ್ ಸಿ
IFSC CODE: BARB0VJBELL
GPay Number:
9449366436










