ಸುಳ್ಯದ ರಂಗ ಮಯೂರಿ ಕಲಾ ಶಾಲೆಯಲ್ಲಿ ಶಾರದಾ ಪೂಜಾ ಕಾರ್ಯಕ್ರಮ

0

ಕಲಾ ಶಾಲೆಯ ಸಂಗೀತ ವಿದ್ಯಾರ್ಥಿಗಳಿಂದ ಭಜನಾ ಸಂಕೀರ್ತನೆ

ಸುಳ್ಯದ ಶ್ರೀರಾಮ ಪೇಟೆಯಲ್ಲಿರುವ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಕಳೆದ 6 ವರ್ಷಗಳಿಂದ ವಿವಿಧ ಕಲಾ ಪ್ರಕಾರಗಳ ತರಬೇತಿ ನೀಡುವ ರಂಗ ಮಯೂರಿ ಕಲಾ ಶಾಲೆಯಲ್ಲಿ ವರ್ಷಂಪ್ರತಿ ನವರಾತ್ರಿ ಸಂದರ್ಭದಲ್ಲಿ ನಡೆಯುವ ಶ್ರೀ ಶಾರದಾ ಪೂಜೆಯು
ಸೆ. 27 ರಂದು ನಡೆಯಿತು.


ಅರ್ಚಕ ಅಭಿರಾಮ್ ಭಟ್ ಸರಳಿಕುಂಜ ರವರು ಬೆಳಗ್ಗೆ ಗಣಪತಿ ಹವನ ನೆರವೇರಿಸಿದರು.

ಬಳಿಕ ಕಲಾ ಶಾಲೆಯ ವಿದ್ಯಾರ್ಥಿಗಳು ದೀಪ ಪ್ರಜ್ವಲಿಸಿ ಭಜನಾ ಸಂಕೀರ್ತನೆ ಸಮರ್ಪಿಸಿದರು.


ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಗಾಯತ್ರಿ ಚಿದಾನಂದ ವಿದ್ಯಾನಗರ ರವರು ನವರಾತ್ರಿಯ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಕಲಾ ಶಾಲೆಯ ಸಂಗೀತ ಶಿಕ್ಷಕಿ ಶ್ರೀಮತಿ ಸುಮನ ರಾವ್ ಪುತ್ತೂರು, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ಶಿಕ್ಷಕಿ ಶ್ರೀಮತಿ ಸುನಂದ ಶೆಟ್ಟಿ, ಶ್ರೀಮತಿ ಜಯಕೃಷ್ಣ ಕಾಯರ್ತೋಡಿ ಉಪಸ್ಥಿತರಿದ್ದರು.


ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಮಹಾಮಂಗಳಾರತಿಯಾಗಿ ಭಜನಾ ಸಂಕೀರ್ತನೆಯು ಸಂಪನ್ನಗೊಂಡಿತು. ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು. ಕಲಾ ಶಾಲೆಯ ಪೋಷಕರು ಭಾಗವಹಿಸಿದರು.