ನಾಯಕನಾಗಿ ನಾಚಪ್ಪ, ಕಾರ್ಯದರ್ಶಿಯಾಗಿ ವಿಜಯ್
ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ 2025 – 26ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆ ಸೆ. 26ರoದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿ ಸಂಘದ ನಾಯಕನಾಗಿ ಅಂತಿಮ ವರ್ಷದ ಕಾನೂನು ಪದವಿ ವಿದ್ಯಾರ್ಥಿ ನಾಚಪ್ಪ ಸಿ.ಎನ್, ಉಪನಾಯಕನಾಗಿ 4ನೇ ವರ್ಷದ ಬಿ.ಏ.ಎಲ್.ಎಲ್.ಬಿ ವಿದ್ಯಾರ್ಥಿ ನಿಹಾಲ್ ಎಮ್.ಡಿ., ಕಾರ್ಯದರ್ಶಿಯಾಗಿ ಅಂತಿಮ ವರ್ಷದ ಏ.ಎಲ್.ಎಲ್.ಬಿ ವಿದ್ಯಾರ್ಥಿ ವಿಜಯ್ ಕೆ, ಕ್ರೀಡಾಕಾರ್ಯದರ್ಶಿಯಾಗಿ ಅಂತಿಮ ವರ್ಷದ ಎಲ್.ಎಲ್.ಬಿ ವಿದ್ಯಾರ್ಥಿ ಉಮ್ಮರ್ ಮುಕ್ತಾರ್, ಜತೆ ಕಾರ್ಯದರ್ಶಿಯಾಗಿ ಅಂತಿಮ ವರ್ಷದ ಬಿ.ಏ.ಎಲ್.ಎಲ್.ಬಿ ವಿದ್ಯಾರ್ಥಿನಿ ಅನಘ ಕೆ.ಪಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.









ಚುನಾವಣಾ ಅಧಿಕಾರಿಗಳಾಗಿ ಕಾಲೇಜಿನ ಹಿರಿಯ ಗ್ರಂಥಪಾಲರಾದ ವಸಂತ್ ಕುಮಾರ್ ಕಜ್ಜೋಡಿ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕರಾದ ರಂಜನ್ ಕೆ ಚುನಾವಣಾ ಕಾರ್ಯ ನಿರ್ವಹಿಸಿದರು. ಕಾಲೇಜಿನ ಪ್ರಾoಶುಪಾಲರಾದ ಶ್ರೀಮತಿ ಟೀನಾ. ಎಚ್.ಎಸ್, ಉಪನ್ಯಾಸಕ ಹಾಗೂ ಉಪನ್ಯಾಸಕೇತರರು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆ.ವಿ. ದಾಮೋದರ ಗೌಡ ಇವರ ಉಪಸ್ಥಿತಿಯಲ್ಲಿ ಚುನಾವಣಾ ಪ್ರಕ್ರಿಯೆ ಸುಸೂತ್ರ ವಾಗಿ ನೆರವೇರಿತು.










