ಎನ್.ಎಸ್.ಎಸ್ ಸ್ವಯಂಸೇವಕರಿಗೆ ಶಿಸ್ತು ಸಂಸ್ಕಾರ ಧೈರ್ಯ ಬೆಳೆಸುತ್ತದೆ.
ಸಂತೋಷ್ ಕುತ್ತಮೊಟ್ಟೆ
ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನ ಘಟಕದ 17 ನೇ ವಾರ್ಷಿಕ ವಿಶೇಷ ಶಿಬಿರ ದಿನಾಂಕ 20-09-2025ನೇ ಶನಿವಾರದಂದು ಸರಕಾರಿ ಪ್ರೌಢ ಶಾಲೆ ಚೆಂಬು, ಮಡಿಕೇರಿ ಇಲ್ಲಿ ನಡೆಯಿತು.

ಶಿಬಿರದ ಉದ್ಘಾಟನೆಯನ್ನು ಗೋಪಾಲಕೃಷ್ಣ ಹೊಸೂರುರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಆರ್ ಗಂಗಾಧರ ಸಂಚಾಲಕರು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇವರು ವಹಿಸಿದ್ದರು.

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತೀರ್ಥರಾಮ ಪೂಜಾರಿಗದ್ದೆ ಉಪಸ್ಥಿತರಿದ್ದರು. ಎರಡನೇಯ ದಿನದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಚಿದಾನಂದ ಯು.ಎಸ್ ಕಮ್ಯುನಿಕೇಶನ್ ಇಂಗ್ಲಿಷ್ ಬಗ್ಗೆ ಮಾಹಿತಿ ನೀಡಿದರು. ಮೂರನೇ ದಿನದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಶಶಾಂಕ್ ರೈ ಕೆ.ಬಿ ಯವರು ಪ್ರಥಮ ಚಿಕಿತ್ಸೆ ಮತ್ತು ಹಾವು ಕಡಿತಕ್ಕೆ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಶಿಬಿರದ ನಾಲ್ಕನೇ ದಿನ ಈ ವರ್ಷದ ಘೋಷ ವಾಕ್ಯವಾದ ನಶಾಮುಕ್ತ ಭಾರತ ಶೀರ್ಷಿಕೆಯಡಿ ಬೀದಿ ನಾಟಕವನ್ನು ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಶಿಬಿರಾರ್ಥಿಗಳು ಪ್ರದರ್ಶನ ನೀಡಿದರು.








ಮಧ್ಯಾಹ್ನದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನಿರ್ದೇಶಕರಾದ ಲೋಕೇಶ್ ಊರುಬೈಲು ರಂಗಕಲೆ, ವಿದ್ಯಾರ್ಥಿಗಳಲ್ಲಿ ಕಲೆಯ ಬಗ್ಗೆ ಆಸಕ್ತಿ ಎಂಬ ವಿಷಯದ ಕುರಿತು ಮಾಹಿತಿ ನೀಡಿದರು, ಐದನೇಯ ದಿನ ವಿದ್ಯಾರ್ಥಿಗಳ ನಡೆ ಕೃಷಿಯ ಕಡೆಗೆ ಎಂಬ ಧ್ಯೇಯದೊಂದಿಗೆ ಚಂದ್ರಶೇಖರ್ ಹೊಸೂರು ಅವರ ಕೃಷಿ ತೋಟಕ್ಕೆ ಭೇಟಿ ನೀಡಿ ಬಿದಿರು ಕೃಷಿಯ ಬಗ್ಗೆ ಶಿಬಿರಾರ್ಥಿಗಳು ಮಾಹಿತಿ ಪಡೆದರು ನಂತರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಸಂಗೀತಾ ರವಿರಾಜ್ ಹೊಸೂರುರವರು ಸಾಹಿತ್ಯದೊಂದಿಗೆ ವಿದ್ಯಾರ್ಥಿಗಳ ಒಡನಾಟ ಎಂಬ ವಿಷಯದ ಕುರಿತು ಮಾಹಿತಿ ನೀಡಿದರು, ಆರನೇಯ ದಿನದ ಕಾರ್ಯಕ್ರಮವನ್ನು ಡಾ. ಕರುಣಾಕರ ನಿಡಿಂಜಿ ಉಪನ್ಯಾಸಕರು ಎಫ್.ಎಂ.ಸಿ ಕಾಲೇಜು ಮಡಿಕೇರಿ ಇವರು ಸಾವಯವ ಕೃಷಿ ಮತ್ತು ಅಸ್ತ್ರ ಒಲೆಯ ಬಗ್ಗೆ ಮಾಹಿತಿ ನೀಡಿದರು ನಂತರ ಸಾಯಂಕಾಲದ ಸಮಯದಲ್ಲಿ ಭೂಮಿ ಪೂಜಾನ ಕಾರ್ಯಕ್ರಮ ಶಿಬಿರ ಜ್ಯೋತಿ, ಶಿಬಿರಾಗ್ನಿ, ಎನ್ ಎಸ್ ಎಸ್ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ದಿನಾಂಕ 26.09.2025 ನೇ ಶುಕ್ರವಾರ 17ನೇ ಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಿತು ಮುಖ್ಯ ಅತಿಥಿಗಳಾಗಿ ಹಿರಿಯ ವಿದ್ಯಾರ್ಥಿ ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ವಹಿಸಿ ಎನ್ ಎಸ್ ಎಸ್ ಸ್ವಯಂಸೇವಕರಿಗೆ ಶಿಸ್ತು, ಸಂಸ್ಕಾರ, ಧೈರ್ಯ ಬೆಳೆಸುತ್ತದೆ ಎಂದು ನುಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಂಶುಪಾಲರಾದ ಸುರೇಶ್ ವಾಗ್ಲೆ ವಹಿಸಿದ್ದರು ಶಿಬಿರಾಧಿಕಾರಿಗಳಾಗಿ ಲಿಂಗಪ್ಪ ಎಂ ರಸಾಯನ ಶಾಸ್ತ್ರ ಉಪನ್ಯಸಕರು, ಸಹ ಶಿಬಿರಾಧಿಕಾರಿಗಳಾಗಿ ಭಾಗ್ಯಶ್ರೀ ಎಚ್ ಬಿ ಗಣಿತಶಾಸ್ತ್ರ ಉಪನ್ಯಾಸಕಿ ಶಿಬಿರವನ್ನು ಅಚ್ಚುಕಟ್ಟಾಗಿ ಮುನ್ನಡೆಸಿದರು.ದಿನನಿತ್ಯದ ಯೋಗಾಸನ ತರಗತಿಗಳನ್ನು ಪ್ರಭಾರ ಪ್ರಾಂಶುಪಾಲರು ಮತ್ತು ಭೌತಶಾಸ್ತ್ರ ಉಪನ್ಯಾಸಕರಾದ ಸುರೇಶ್ ವಾಗ್ಲೆ ನಡೆಸಿಕೊಟ್ಟರು.
ಕಾರ್ಯಕ್ರಮ ಯಶಸ್ವಿಯಾಗಲು ಸರಕಾರಿ ಪ್ರೌಢ ಶಾಲೆ ಚೆಂಬು ಮಡಿಕೇರಿ ಇದರ ಮುಖ್ಯಗುರುಗಳಾದ ಡಾ.ಯೋಗೀಶ್ ಬಿ ಎಸ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ರಮೇಶ್ ಕುಮಾರ್ ಕೆ ಜಿ ಹಾಗೂ ಶಿಕ್ಷಕ ವೃಂದದವರು ಮತ್ತು ಊರಿನ ಗಣ್ಯರು ಸಹಕಾರ ನೀಡಿದರು. ಉಪನ್ಯಾಸಕರಾದ ಮೋಹನಚಂದ್ರ ಎನ್ ಪಿ, ಪದ್ಮಕುಮಾರ್ ಜಿ ಆರ್, ಚಂದ್ರಶೇಖರ್ ಎಂ. ಉಪನ್ಯಾಸಕಿಯರಾದ ಅಶ್ವಿನಿ ಕೆ ಎಂ, ಶಾಂತಿ ಎ ಕೆ, ನಂದಿನಿ ಎ.ಪಿ, ವಿನುತಾ ಎಂ ಮತ್ತಿತರರು ಶಿಬಿರದಲ್ಲಿ ಉಪಸ್ಥಿತರಿದ್ದರು ಸಿಬ್ಬಂದಿಗಳಾದ ಧನ್ಯರಾಜ್, ಚಿದಾನಂದ, ಬೃಂದಾ, ವಿಜಯ್, ಚಂದ್ರಶೇಖರ ಎನ್ ಸಹಕರಿಸಿದರು.










