ಅಂಬಟೆಡ್ಕ: ಸಫಲ ಉದ್ಯಮ ಎಲೆಕ್ಟ್ರಾನಿಕ್ ಸಂಸ್ಥೆಗೆ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಭೇಟಿ

0

ಸಂಸ್ಥೆ ವತಿಯಿಂದ ಗೌರವ ಸನ್ಮಾನ

ಸುಳ್ಯ ಅಂಬಟೆಡ್ಕದಲ್ಲಿ ಅ. ೨ ರಂದು ಶುಭಾರಂಭಗೊಂಡ ಸಫಲ ಉದ್ಯಮ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ಹಿಂದೂ ಸಂಘಟನೆಯ ಮುಖಂಡ ಹಾಗೂ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲರವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆ ವತಿಯಿಂದ ಪುತ್ತಿಲರಿಗೆ ಗೌರವ ಸನ್ಮಾನ ನಡೆಯಿತು.


ಬಳಿಕ ಮಾತನಾಡಿದ ಅವರು ಸುಳ್ಯ ಭಾಗದ ಐವರು ಯುವಕರು ಈ ಒಂದು ಸಂಸ್ಥೆಯನ್ನು ಆರಂಭಿಸಿದ್ದು, ಅವರ ಈ ಶ್ರಮೆಗೆ ಫಲ ಸಿಗಲಿ. ಯುವಶಕ್ತಿ ದೇಶದ ಶಕ್ತಿಯಾಗಿದ್ದು ಆರ್ಥಿಕವಾಗಿ ಯುವಕರು ಬೆಳೆಯಬೇಕಾಗಿದೆ.ಆ ಒಂದು ಪ್ರಯತ್ನದಲ್ಲಿ ಈ ಯುವಕರ ತಂಡ ಕಾರ್ಯ ಪ್ರವರ್ತನೆ ಮಾಡುತ್ತಿದ್ದು ಅವರಿಗೂ ಸಂಸ್ಥೆಗೂ ಶುಭವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು,ಸಂಸ್ಥೆಯ ಪಾಲುದಾರರು ಉಪಸ್ಥಿತರಿದ್ದರು.