ಮಡಪ್ಪಾಡಿಯಲ್ಲಿ ಬೃಹತ್ ರಕ್ತದಾನ ಶಿಬಿರ – ಸನ್ಮಾನ

0

ಯುವಕ ಮಂಡಲ ಮಡಪ್ಪಾಡಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಬ್ಲಡ್ ಕಲೆಕ್ಷನ್ ಸೆಂಟರ್ ಮಂಗಳೂರು ಇದರ ವತಿಯಿಂದ ಅ.05 ರಂದು ಮಡಪ್ಪಾಡಿ ಯುವಕ ಮಂಡಲ ವಠಾರದಲ್ಲಿ ರಕ್ತದಾನ ಶಿಬಿರ ನಡೆಯಿತು.


ಸುಮಂತ್ ಶೀರಡ್ಕ ಸ್ವಾಗತಿಸಿದರು. 2025-26 ರ ಸಾಲಿನ ಆತ್ಮಯೋಜನೆ ಅಡಿಯ ಕೃಷಿಪ್ರಶಸ್ತಿ ವಿಜೇತರಾದ ಶಿವರಾಮ ಮಡಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾಜಯರಾಮ್ ಮಡಪ್ಪಾಡಿ, ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು, ಲೋಹಿತ್ ಬಾಳಿಕಳ ಕೋಶಾಧಿಕಾರಿಗಳು ಯುವಜನ ಸಂಯುಕ್ತ ಮಂಡಳಿ ಸುಳ್ಯ ಭಾಗವಹಿಸಿ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಕಿರಣ್ ಶೀರಡ್ಕ ವಹಿಸಿದ್ದರು.


ಈ ಸಂದರ್ಭದಲ್ಲಿ ಮಡಪ್ಪಾಡಿಯ ಶ್ರೀ ರಾಮ ಭಜನಾ ಮಂಡಳಿಗಾಗಿ ಮಂದಿರ ನಿರ್ಮಾಣಕ್ಕೆ ಸ್ವ ಇಚ್ಛೆಯಿಂದ ಸ್ಥಳದಾನ ನೀಡಿದ ಶ್ರೀಮತಿ ತಾರ ಚಂದ್ರಶೇಖರ ಗುಡ್ಡೆಮನೆ ಇವರನ್ನು ಯುವಕಮಂಡಲದ ವತಿಯಿಂದ ಗೌರವಿಸಲಾಯಿತು.
ಯುವಕ ಮಂಡಲದ ಕಾರ್ಯದರ್ಶಿ ರಕ್ಷಿತ್ ಶೀರಡ್ಕ ವಂದಿಸಿದರು.ಸುಮಾರು 40 ಜನರಿಗಿಂತಲೂ ಹೆಚ್ಚು ಜನರು ರಕ್ತದಾನ ಮಾಡುವುದರೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.