ದಸರಾ ರಜೆ ಮುಕ್ತಾಯ ಹಿನ್ನಲೆ : ಸುಬ್ರಹ್ಮಣ್ಯದಲ್ಲಿ ಕಿಕ್ಕಿರಿದ ಯಾತ್ರಿಕರು

0

ಎಲ್ಲೆಂದರಲ್ಲಿ ಜನವೋ ಜನ, ತುಂಬಿ ತುಳುಕುತ್ತಿದ್ದ ವಾಹನಗಳು

ಕುಕ್ಕೆ ಶ್ರೀ ಸುಬ್ರಮಣ್ಯದಲ್ಲಿ ಇಂದು ಎಲ್ಲೆಂದರಲ್ಲಿ ಯಾತ್ರಿಕರು ಮತ್ತು ವಾಹನಗಳಿಂದ ತುಂಬಿ ತುಳುಕುತ್ತಿದೆ.

ದಸರಾ ರಜೆ ಕೊನೆಗೊಳ್ಳುತ್ತಿರುವ ದಿನಗಳ ಕಾರಣ ಕುಕ್ಕೆ ಸುಬ್ರಹ್ಮಣ್ಯಕ್ಕೆ ವ್ಯಾಪಕ ಪ್ರಮಾಣದಲ್ಲಿ ಯಾತ್ರಿಕರು ಆಗಮಿಸಿದ್ದಾರೆ. ಅಲ್ಲದೆ ವಾಹನಗಳು ಬಂದಿದ್ದು ಪಾರ್ಕಿಂಗ್ ಕ್ಷೇತ್ರಗಳೆಲ್ಲ ತುಂಬಿ ತುಳುಕಿದವು. ದೇವಸ್ಥಾನದ ವ್ಯಾಪ್ತಿ , ಆದಿ ಸುಬ್ರಹ್ಮಣ್ಯ, ರಥಬೀದಿ, ಪ್ರಮುಖ ಸ್ಥಳಗಳು, ಬೀದಿಬದಿ, ಅಂಗಡಿ ಮುಂಗಟ್ಟುಗಳಲ್ಲಿ ಎಲ್ಲಡೆ ಯಾತ್ರಿಕರು ಕಂಡು ಬಂದಿದ್ದಾರೆ. ದೇವಸ್ಥಾನ ಒಳಗಡೆಯೂ ಭಕ್ತಾಧಿಗಳಿಂದ ತುಂಬಿ ತುಳುಕಿತು.


ಯಾಂತ್ರಿಕರಿಂದ ತುಂಬಿದರೂ, ದೇವಸ್ಥಾನದ ವತಿಯಿಂದ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದು, ಸಿಬ್ಬಂದಿಗಳು, ವಿಶೇಷವಾಗಿ ಭದ್ರತಾ ಸಿಬ್ಬಂದಿಗಳು , ಪೊಲೀಸ್ ಇಲಾಖೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಲ್ಲಿ ಸಹಕರಿಸುತ್ತಿರುವುದು ಕಂಡು ಬಂತು.