ಸುಬ್ರಹ್ಮಣ್ಯ: ತಂಬಾಕು ಮುಕ್ತ ಗ್ರಾಮವಾಗಿ ಘೋಷಣೆ

0

ಪಂಚಾಯತ್ ಅಧಿಕಾರಿಗಳಿಂದ ದಾಳಿ, ತಂಬಾಕು ವ್ಯಾಪಾರಸ್ಥರಿಗೆ ದಂಡ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್
ವತಿಯಿಂದ ತಂಬಾಕು ಮುಕ್ತ ಗ್ರಾಮ ವಾಗಿ ಘೋಷಣೆ ಮಾಡಲಾಗಿದ್ದು ಅದರಂತೆ ಅ.4 ರಂದು ಪಂಚಾಯತ್ ಅಧಿಕಾರಿಗಳಿಂದ ಕೆಲ ಅಂಗಡಿಗೆ ದಾಳಿ ಮಾಡಿ ವ್ಯಾಪಾರಸ್ತರಿಗೆ ದಂಡ ವಿಧಿಸಿದ ಘಟನೆ ವರದಿಯಾಗಿದೆ.

ಸುಬ್ರಹ್ಮಣ್ಯದ ರಥ ಬೀದಿ ಯಲ್ಲಿರುವ ಅಂಗಡಿಗಳಿಗೆ ದಾಳಿ ನಡೆಸಿ ಗುಟ್ಕಾ, ಬೀಡಿ, ಸಿಗರೇಟು, ಪಾನ್ ಪರಾಗ್ ಇತ್ಯಾದಿಗಳನ್ನ ಮಾರುವವರಿಗೆ ಹಾಗೂ ಕಸ ಕಡ್ಡಿ ಪ್ಲಾಸ್ಲಿಕ್ ಇತ್ಯಾದಿಗಳನ್ನು ಎಲ್ಲೆಡೆಯಲ್ಲಿ ಬಿಸಾಕಿ ಸ್ವಚ್ಛತೆಯನ್ನ ಕಾಪಾಡಿಕೊಳ್ಳದ ವ್ಯಾಪಾರಸ್ಥರಿಗೆ ದಂಡ ಶುಲ್ಕವನ್ನು ವಿಧಿಸಿರುತ್ತಾರೆ. ರೂ. 500/= ರಂತೆ ದಂಡ ವಿಧಿಸಲಾಗಿರುವುದಾಗಿ ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಜಾತಾ ಕಲ್ಲಾಜೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಮೋನಪ್ಪ ಸುಬ್ರಹ್ಮಣ್ಯ, ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಆಚಾರ್ಯ, ಪಂಚಾಯತ್ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.