ಅಂಬೆಟೆಡ್ಕ :ಸಫಲ ಉದ್ಯಮ ಎಲೆಕ್ಟ್ರಾನಿಕ್ ಸಂಸ್ಥೆಗೆ ಹಿಂದೂ ಸಂಘಟನೆಯ ಮುಖಂಡ ಸತ್ಯಜಿತ್ ಸೂರತ್ಕಲ್ ಭೇಟಿ

0

ಸಂಸ್ಥೆಗೆ ಶುಭ ಹಾರೈಕೆಯ ನುಡಿಗಳು, ಸಂಸ್ಥೆಯ ವತಿಯಿಂದ ಗೌರವ ಸನ್ಮಾನ

ಸುಳ್ಯ ಅಂಬಟೆಡ್ಕದಲ್ಲಿ ಅ. 2 ರಂದು ಶುಭಾರಂಭಗೊಂಡ ಸಫಲ ಉದ್ಯಮ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ಹಿಂದೂ ಸಂಘಟನೆಯ ಮುಖಂಡ ಸತ್ಯಜಿತ್ ಸೂರತ್ಕಲ್ ರವರು ಅ. 7 ರಂದು ಭೇಟಿ ನೀಡಿ ಸಂಸ್ಥೆಗೆ ಶುಭ ಹಾರೈಸಿದರು.ಸಂಸ್ಥೆ ವತಿಯಿಂದ ಇವರುಗಳಿಗೆ ಗೌರವ ಸನ್ಮಾನ ನಡೆಯಿತು. ಸುಳ್ಯ ಭಾಗದ ಐವರು ಯುವಕರು ಈ ಒಂದು ಸಂಸ್ಥೆಯನ್ನು ಆರಂಭಿಸಿದ್ದು ಅವರ ಈ ಶ್ರಮೆಗೆ ಫಲ ಸಿಗಲಿ.


ನಮ್ಮ ಮೇಲೆ ಅಭಿಮಾನವಿಟ್ಟು ಈ ಸಂಸ್ಥೆಗೆ ನನ್ನನ್ನು ಸ್ವಾಗತಿಸಿದ ಸಂಸ್ಥೆಯ ಎಲ್ಲಾ ಪಾಲುದಾರರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಈ ಯುವಕರ ತಂಡ ಕಾರ್ಯ ಪ್ರವರ್ತನೆ ಯಶಸ್ವಿಯಾಗಲಿ ಸುಳ್ಯದಲ್ಲಿ ಉತ್ತಮ ಎಲೆಕ್ಟ್ರಾನಿಕ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಮುಂದಿನ ದಿನಗಳಲ್ಲಿ ಪಾತ್ರವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗದ ಮುಖಂಡ ಜಗದೀಶ್ ನೆತ್ತರಕೆರೆ, ಮುಖಂಡರುಗಳಾದ ಲಕ್ಷ್ಮೀಶ್ ಗೌಡ, ಹಾಗೂ ಸಂಘಟನೆಯ ಕಾರ್ಯಕರ್ತರು,ಸಂಸ್ಥೆಯ ಪಾಲುದಾರರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.