ಸರಕಾರದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಶ್ಲಾಘನೀಯ : ತಾಲೂಕು ಕಾರ್ಯನಿರ್ವಹಣಾಧಿಕಾರಿ ರಾಜಣ್ಣ
AVSS ಸುಳ್ಯ ಶಾಖೆ ಮತ್ತು ಮೊಗೇರ ಸಂಘ ಇದರ ಜಂಟಿ ಆಶ್ರಯದಲ್ಲಿ ICAR – ಸೆಂಟ್ರಲ್ ಕೋಸ್ಟಲ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್ , Ela , Goa. ಸಹಕಾರದಿಂದ ತೋಟಗಾರಿಕಾ ಬೆಳೆಗಳ ಕುರಿತು ಅರಿವು ಮತ್ತು ಕೃಷಿ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಸುಳ್ಯ ತಾಲೂಕು ಪಂಚಾಯತ್ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ICAR ಗೋವಾ ಇದರ ಅಧ್ಯಕ್ಷರು ಮತ್ತು ಹಿರಿಯ ವಿಜ್ಞಾನಿಗಳಾದ ಅಕುಲ್ ರೆಡ್ಡಿ ವಹಿಸಿದ್ದರು. ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಇವರು ಡಾ. ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿ ಮಾತನಾಡಿದರು.
ICAR & AVSS ಸುಳ್ಯ ಶಾಖೆಯು ಸರಕಾರದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಗೆ ಶುಭಹಾರೈಸಿದರು.















ಕಾರ್ಯಕ್ರಮದಲ್ಲಿ ಸಾಮಾಜಿಕ ಮುಖಂಡರಾದ ನಂದರಾಜ್ ಸಂಕೇಶ , ತೋಟಗಾರಿಕೆ ಇಲಾಖೆ ಸುಳ್ಯ ಇದರ ಸಹಾಯಕ ನಿರ್ದೇಶಕರಾದ ಪ್ರಮೋದ್ , ICAR ಗೋವಾ ಇದರ ಸಹಾಯಕ ವಿಜ್ಞಾನಿ ಓಮರ್ ಡಿಸೋಜ , ICAR ಪುತ್ತೂರಿನ ನಿರ್ದೇಶಕರು ಮಂಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಸುಳ್ಯದ ತೋಟಗಾರಿಕೆ ಇಲಾಖೆಯ ಅರ್ಭಣ್ಣ ಉಪಸ್ಥಿತರಿದ್ದರು. ಸುಳ್ಯ ತಾಲೂಕಿನ ಪರಿಶಿಷ್ಟ ಜಾತಿಯ 25 ಫಲಾನುಭವಿಗಳು ಸವಲತ್ತುಗಳನ್ನು ಪಡೆದುಕೊಂಡರು.
ಪ್ರಕಾಶ್ ಪಿ.ಎಸ್ ಪಾತೆಟ್ಟಿ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ , ಹರಿಣಾಕ್ಷಿ ಮಹಾಬಲಡ್ಕ ಪ್ರಾರ್ಥಿಸಿ ಎಲ್ಲರನ್ನೂ ಸ್ವಾಗತಿಸಿದರು ಮತ್ತು ಚಂದ್ರಶೇಖರ ಪಲ್ಲತಡ್ಕ ವಂದಿಸಿದರು. ಕಾರ್ಯಕ್ರಮವು ಸುಳ್ಯ ತಾಲೂಕು AVSS ಸುಳ್ಯ ಶಾಖೆಯ ಅಧ್ಯಕ್ಷರಾದ ಕರುಣಾಕರ ಪಲ್ಲತಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.










