ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಎನ್.ಎಸ್. ಎಸ್ ಘಟಕದ ವತಿಯಿಂದ ಕ್ಷಯ ಮುಕ್ತ ಭಾರತ-2025 ಕಾರ್ಯಕ್ರಮ ಅ. 9ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ವಹಿಸಿದ್ದರು.










ಸಂಪನ್ಮೂಲ
ವ್ಯಕ್ತಿಯಾಗಿ ಸುಳ್ಯ ಆರೋಗ್ಯ ಇಲಾಖೆಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಮೇಲ್ವಿಚಾರಕ ಲೋಕೇಶ್
ತಂಟೆಪ್ಪಾಡಿ ಭಾಗವಹಿಸಿ ಮಾಹಿತಿ ನೀಡಿದರು. ಎನ್.ಎಸ್.ಎಸ್ ಘಟಕಧಿಕಾರಿ ಚಿತ್ರಲೇಖಾ ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೋಧಕ ವೃಂದ, ಎನ್.ಎಸ್.ಎಸ್ ನಾಯಕರು, ಎನ್.ಎಸ್.ಎಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಘಟಕದ ಸ್ವಯಂ ಸೇವಕರು ಪ್ರಾರ್ಥಿಸಿದರು. ಹವ್ಯಸ್ ಸ್ವಾಗತಿಸಿ, ಗೌತಮ್ ಕೆ ವಂದಿಸಿದರು. ಕು. ಅರ್ಪಿತಾ ಡಿ.ಕೆ ಕಾರ್ಯಕ್ರಮ ನಿರೂಪಿಸಿದರು.










